ಮುಸ್ಲಿಂ ಯುವಕನ ಜತೆ ಹಿಂದೂ ಯುವತಿ ಪಯಣ : ಪ್ರಶ್ನಿಸಿದ ಹಿಂದೂ ಯುವಕರ ಮೇಲೆ ಕೇಸ್

ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಮುಸ್ಲಿಂ ಯುವಕನ ಜತೆ ಹಿಂದೂ ಯುವತಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದನ್ನು ಪ್ರಶ್ನಿಸಿದ ಹಿಂದೂ ಯುವಕರ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ ನಝೀರ್ ಎಂಬಾತ ಅಟೋರಿಕ್ಷಾದಲ್ಲಿ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿ ಪೂಜಾ ಎಂಬಾಕೆಯನ್ನು ಕುಳ್ಳಿರಿಸಿಕೊಂಡು ಉಪ್ಪಿನಂಗಡಿಯಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಗುಂಡ್ಯಕ್ಕೆಬಂದು ಗುಂಡ್ಯದಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಹಿಂದೂ ಯುವಕರ ಕೈಗೆ ಸಿಕ್ಕಿಬಿದ್ದಿದ್ದರು.

ಈ ಪ್ರಕರಣಕ್ಕೆ ಸಂಭಂದಿಸಿದಂತೆ ನಝೀರ್ ಉಪ್ಪಿನಂಗಡಿ ಠಾಣೆಯಲ್ಲಿ ಸುರೇಂದ್ರ, ತೀರ್ಥಪ್ರಸಾದ್‌ ಜಿತೇಶ್‌ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದಾರೆ.

ಆತ ನೀಡಿದ ದೂರಿನಂತೆ ಆತ‌ನ ಅಟೋರಿಕ್ಷಾವನ್ನು ತಡೆದು ನಿಲ್ಲಿಸಿ “ ನೀವು ಎಲ್ಲಿಗೆ ಹೋಗುತ್ತಿದ್ದೀರಿ ? ನಿಮ್ಮ ಹೆಸರೇನು ಎಂದು ಹೇಳಿದಾಗ ನಝೀರ್ ಮತ್ತು ಜೊತೆಯಲ್ಲಿದ್ದ ಪೂಜಾರವರು ತಮ್ಮ ಹೆಸರನ್ನು ಹೇಳಿದಾಗ ಆರೋಪಿತರು ಆತನನ್ನು ಉದ್ದೇಶಿಸಿ “ ನಿನಗೆ ತಿರುಗಾಡಲು ಹಿಂದೂ ಹುಡುಗಿಯೇ ಆಗಬೇಕಾ ? ಎಂದು ಹೇಳುತ್ತಾ ಕೈಯಿಂದ ಮುಖಕ್ಕೆ ತಲೆಗೆ ಕೈಯಿಂದ ಯದ್ವಾತದ್ವಾ ಹೊಡೆದುದಲ್ಲದೆ ಅಲ್ಲಿಯ ರಸ್ತೆಯ ಬದಿಯಿಂದ ಪೊದೆಯಿಂದ ಬೆತ್ತವನ್ನು ತುಂಡು ಮಾಡಿಕೊಂಡು ಬಂದು ಬೆತ್ತದಿಂದ ಬೆನ್ನಿಗೆ ಕಾಲಿಗೆ ಕೈಗೆ ಹಲ್ಲೆ ನಡೆಸಿರುವುದಲ್ಲದೆ ಇನ್ನುಮುಂದಕ್ಕೆ ಹಿಂದು ಹುಡುಗಿಯನ್ನು ಸುತ್ತಾಡಿಸಿದರೆ ಕೊಲ್ಲದೆ ಬಿಡುವುದಿಲ್ಲವಾಗಿ ಜೀವ ಬೆದರಿಕೆಯೊಡ್ಡಿದ್ದಲ್ಲದೆ ಜೊತೆಯಲ್ಲಿದ್ದ ಪೂಜಾರವರಿಗೆ ಬೈದಿದ್ದಾರೆ ಎಂದು ದೂರು ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಧಿತ ಯುವಕರನ್ನು ಬಾಲಚಂದ್ರ, ರಂಜಿತ್ ಎಂದು ಗುರುತಿಸಲಾಗಿದೆ.

ಈ ಮೊದಲು ಯುವತಿಯ ಹೆಸರು ಗುಪ್ತವಾಗಿತ್ತು,ಇದೀಗ ದೂರು ನೀಡುವ ಮೂಲಕ ಯುವತಿಯ ಹೆಸರು ಎಲ್ಲೆಡೆ ತಿಳಿಯುವಂತಾಗಿದೆ.

ಲಭ್ಯ ಮಾಹಿತಿ ಪ್ರಕಾರ ಪೂಜಾ ತಂದೆಯನ್ನು ಕಳೆದುಕೊಂಡಿದ್ದು,ತಾಯಿ ಹಾಗೂ ಸಹೋದರಿಯೊಂದಿಗೆ ವಾಸಿಸುತ್ತಿದ್ದು,ಕೆಲ ಸಮಯಗಳ ಹಿಂದೆ ಈಕೆಯ ಸಹೋದರಿಯೂ ಇಂತಹ ಪ್ರೇಮಜಾಲದಲ್ಲಿ ಸಿಲುಕಿದ್ದು ಬಳಿಕ ಹಿಂದೂ ಸಂಘಟನೆಯ ಗಮನಕ್ಕೆ ಬಂದು ಎಚ್ಚರಿಕೆ ನೀಡಲಾಗಿತ್ತು ಎನ್ನಲಾಗಿದೆ.

ಪುರುಷರಿಲ್ಲದ ಮನೆಯನ್ನು ಗುರುತು ಮಾಡಿಕೊಂಡು ವ್ಯವಸ್ಥಿತವಾಗಿ ಮನೆಯಲ್ಲಿನ ಯುವತಿಯರನ್ನು ತಮ್ಮ ಬಲೆಯೊಳಗೆ ಹಾಕಿಕೊಂಡು ಮಾನಹಾನಿ ಮಾಡುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಹಿಂದೂ ಸಂಘಟನೆಯವರು ಆಪಾದಿಸಿದ್ದಾರೆ

Leave A Reply

Your email address will not be published.