ಟೀಚರಮ್ಮನ ಕಾಮ‌ಪುರಾಣ : 16 ವರ್ಷದ 3 ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ |

ಇದೊಂದು ಶಿಕ್ಷಕಿಯ ಕಾಮಪುರಾಣ. ಈಕೆ ಗಂಡನಿಂದ ಡಿವೋರ್ಸ್ ತಗೊಂಡು ಬೇರೆಯವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಇಷ್ಟು ಆಗಿದ್ದರೆ ಪರ್ವಾಗಿಲ್ಲ. ತನ್ನ ಶಾಲೆಯ ವಿದ್ಯಾರ್ಥಿಗಳನ್ನು ಕೂಡಾ ತನ್ನ ಕಾಮತೃಷೆಗೆಂದು ಬಳಸಿಕೊಂಡಿದ್ದಾಳೆ. ಈಗ ಈ ವಿಷಯ ಹೊರಗೆ ಬಿದ್ದಿದ್ದು, ಪ್ರಕರಣ ದಾಖಲಾಗಿದೆ.

ಶಾಲಾ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳ ಗ್ರೂಪ್ ಸೆಕ್ಸ್ ವಿಡಿಯೋ ಕುರಿತು ತಮಿಳುನಾಡು ಸೈಬರ್ ಸೆಲ್ ತನಿಖೆ ಪ್ರಾರಂಭ ಮಾಡಿದ್ದಾರೆ.

ಮಹಿಳೆಯ ಪ್ರಿಯಕರ ಅಂದರೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಈ ವೀಡಿಯೋವನ್ನು ಅವನ ಕೆಲವು ಸ್ನೇಹಿತರಿಗೆ ತೋರಿಸಿದ್ದಾನೆ. ಈ ಮೂಲಕ ಈ ವಿಷಯ ಬಯಲಿಗೆ ಬಂದಿದೆ. ಹಣಕ್ಕಾಗಿ ಅಂತರಾಷ್ಟ್ರೀಯ ಅಶ್ಲೀಲ ತಾಣಗಳಿಗೆ ವಿಡಿಯೋ ಅಪ್ಲೋಡ್ ಮಾಡಲಾಗಿದೆಯೇ ಅಥವಾ ಕೆಲವೇ ಜನರ ನಡುವೆ ಪ್ರಸಾರವಾಗಿದೆಯೇ ಎಂಬ ಬಗ್ಗೆ ಸೈಬರ್ ಸೆಲ್ ತನಿಖೆ ನಡೆಸುತ್ತಿದೆ.

ಮಧುರೈನ ಸರ್ಕಾರಿ ಶಾಲೆಯೊಂದರ 42 ವರ್ಷದ ಶಿಕ್ಷಕಿ ಮತ್ತು ಆಕೆಯ 39 ವರ್ಷದ ಪ್ರೇಮಿಯನ್ನು ಭಾನುವಾರ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಅಶ್ಲೀಲ ವಿಷಯವನ್ನು ಹಂಚಿಕೊಂಡ ಎಲ್ಲರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಡಿಜಿಪಿ ಕಚೇರಿಯಿಂದ ಕಟ್ಟುನಿಟ್ಟಿನ ಸೂಚನೆಗಳಿವೆ ಎಂದು ಮಧುರೈ ಸೈಬರ್ ಸೆಲ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಹಿಳೆ ಪತಿಯಿಂದ 2010ರಲ್ಲಿ ಬೇರ್ಪಟ್ಟಿದ್ದಾಳೆ. ಅನಂತರ ಉದ್ಯಮಿ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಈ ಶಿಕ್ಷಕಿ 16 ವರ್ಷದ ಮೂವರು ವಿದ್ಯಾರ್ಥಿಗಳನ್ನು ತನ್ನ ಮನೆಗೆ ಕರೆದು ಗ್ರೂಪ್ ಸೆಕ್ಸ್‌ ಮಾಡಿದ್ದಾಳೆ. ಇದನ್ನು ಉದ್ಯಮಿ ವೀಡಿಯೋ ಮಾಡಿದ್ದಾನೆ.

ಅಷ್ಟು ಮಾತ್ರವಲ್ಲದೇ ಈ ವೀಡಿಯೋವನ್ನು ತನ್ನ ಕೆಲ ಸ್ನೇಹಿತರಿಗೆ ತೋರಿಸಿ ವೀಡಿಯೋ ಶೇರ್ ಮಾಡಿದ್ದಾನೆ.

ಅಪ್ರಾಪ್ತ ಬಾಲಕರು ಆಕೆಯ ವಿರುದ್ಧ ದೂರು ನೀಡಿದ ನಂತರ ಮಧುರೈ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರ ವಿರುದ್ಧ ಪೋಕ್ಸೋ ಕಾಯಿದೆ ಸೇರಿ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲು ಮಾಡಲಾಗಿದೆ. ವಿಡಿಯೋ ಪ್ರಸಾರ ಮಾಡಿದವರನ್ನು ವಿಚಾರಣೆ ನಡೆಸುತ್ತಿದ್ದು, ಅಗತ್ಯ ಬಿದ್ದರೆ ಬಂಧಿಸಲಾಗುವುದು ಎಂದು ಸೈಬರ್ ಸೆಲ್ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply