2029 ರಲ್ಲಿ ಭಾರತಕ್ಕೆ ಮುಸ್ಲಿಂ ಪ್ರಧಾನಿ |
ಮುಸ್ಲಿಂ ಪ್ರಧಾನಿಯಾದರೆ ಶೇ 40 ಹಿಂದೂಗಳು ಕೊಲ್ಲಲ್ಪಡುತ್ತಾರಂತೆ !

ನವದೆಹಲಿ: ‘ದೇಶದಲ್ಲಿ ಒಂದು ವೇಳೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ ಮುಂದಿನ 20 ವರ್ಷಗಳಲ್ಲಿ ದೇಶದ ಶೇ 50ರಷ್ಟು ಹಿಂದೂಗಳು ಮುಸ್ಲಿಮರಾಗಿ ಮತಾಂತರಗೊಳ್ಳಲಿದ್ದಾರೆ’ ಎಂದು ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಗಾನಂದ ಭಾನುವಾರ ಹೇಳಿಕೆ ನೀಡಿದ್ದಾರೆ.

‘2029 ಅಥವಾ 2034 ಅಥವಾ 2039ರಲ್ಲಿ ಮುಸ್ಲಿಂ ವ್ಯಕ್ತಿ ಪ್ರಧಾನಿಯಾಗಲಿದ್ದಾರೆ. ಒಮ್ಮೆ ಮುಸ್ಲಿಂ ಪ್ರಧಾನಿಯಾದರೆ, ಶೇ 50 ಹಿಂದೂಗಳು ಇಸ್ಲಾಂಗೆ ಮತಾಂತರವಾಗಲಿದ್ದಾರೆ. ಶೇ 40ರಷ್ಟು ಜನರು ಕೊಲ್ಲಲ್ಪಡಲಿದ್ದಾರೆ. ಉಳಿದ ಶೇ 10ರಷ್ಟು ಜನರು ಮುಂದಿನ 20 ವರ್ಷಗಳಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ಪಾಶ್ಚಾತ್ಯ ದೇಶಗಳನ್ನು ಸೇರಿಕೊಳ್ಳಲಿದ್ದಾರೆ’ ಎಂದು ಯತಿ ನರಸಿಂಗಾನಂದ ಹೇಳಿದ್ದಾರೆ.


Ad Widget

Ad Widget

Ad Widget

‘ಹಿಂದೂ ಮಹಾಪಂಚಾಯತ್’ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕೆಂದು ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಹರಿದ್ವಾರ ಮತ್ತು ದೆಹಲಿಯ ಜಂತರ್ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದ ಗುಂಪು ಇಲ್ಲಿನ ಬುರಾರಿ ಮೈದಾನದಲ್ಲಿ ಮಹಾಪಂಚಾಯತ್ ಅನ್ನು ಆಯೋಜಿಸಿತ್ತು. ಹಲವು ಮಂದಿ ಹಿಂದೂ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

error: Content is protected !!
Scroll to Top
%d bloggers like this: