ವಿಟ್ಲ: ಕಡೂರು – ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಕಾಶಿಮಠದಲ್ಲಿ ನಿಂತಿದ್ದ ಬೈಕ್ ಗೆ ತುರ್ತು ಸೇವೆಯ ವಾಹನವೊಂದು 112 ಡಿಕ್ಕಿಯಾದ ಪರಿಣಾಮ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿನಯ್ (35), ಶಿವರಾಮ್ (22) ಅಪಘಾತದಿಂದ ಗಾಯಗೊಂಡವರು.
ಉಕ್ಕುಡ ಕಡೆಯಿಂದ ಆಗಮಿಸಿದ ಬೈಕ್ ಸವಾರರು ಮುಂಭಾಗದಿಂದ ವಾಹನ ಬರುವುದನ್ನು ಗಮನಿಸಿ ತಮ್ಮ ಬೈಕನ್ನು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ 112 ತುರ್ತುವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಟ್ಲ ಸಮುದಾಯ ಪ್ರಾಥಮಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಚಿಕಿತ್ಸೆ ನೀಡಲಾಗಿದೆ. 112 ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.