ಸಾಲ ಮರುಪಾವತಿ ಮಾಡಿದರೂ, ಪತ್ನಿಯ ಅಶ್ಲೀಲ ಫೋಟೋ ಎಲ್ಲರಿಗೂ ಕಳುಹಿಸಿದ ಸೈಬರ್ ಅಪರಾಧಿಗಳು : ಪತಿಯಿಂದ ದೂರು ದಾಖಲು

34 ವರ್ಷದ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹಂಚಿಕೊಂಡು ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಸೈಬರ್ ಕ್ರೈಮ್ ಪೊಲೀಸರಿಗೆ ಬುಧವಾರ ದೂರು ನೀಡಿದ್ದಾರೆ.

ಅಹಮದಾಬಾದ್ ನ ಬೆಹ್ರಾಂಪುರ ಪ್ರದೇಶದಲ್ಲಿ ವಾಸಿಸುವ ಮತ್ತು ಗಾರ್ಮೆಂಟ್ಸ್ ವ್ಯವಹಾರವನ್ನು ಹೊಂದಿರುವ ವ್ಯಕ್ತಿ ಸಾಲದ ಹಣ ಮರುಪಾವತಿಸಿದರೂ ತನಗೆ ಈ ರೀತಿಯಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸು ದಾಖಲಿಸಿದ್ದಾರೆ.


Ad Widget

Ad Widget

Ad Widget

ಉದ್ಯಮಿಯ ದೂರಿನ ಪ್ರಕಾರ, ಡಿಸೆಂಬರ್ 28, 2021 ರಂದು, ಕೊರೊನಾ ಕಾರಣದಿಂದ ಆರ್ಥಿಕ ಸಮಸ್ಯೆ ಎದುರಾಯಿತು. ಹಾಗಾಗಿ ಸ್ನೇಹಿತರೊಬ್ಬರ ಮೂಲಕ ಸಾಲವನ್ನು ಪಡೆದೆ. ಅವರು ಆರಂಭದಲ್ಲಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ 6,000 ರೂ. ಸಾಲಕ್ಕೆ ಹಣ ನೀಡಲು ಹೇಳಿದರು. ವಿವಿಧ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ಅವರು ಸುಮಾರು 3,480 ರೂ. ಪಡೆದರು. ಸುಮಾರು ಒಂದು ವಾರದ ನಂತರ 6,000 ರೂ.ಗಳನ್ನು ವಾಪಸ್ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಇದೇ ರೀತಿಯ 14 ಅರ್ಜಿಗಳಿಂದ ಒಟ್ಟು 1.20 ಲಕ್ಷ ರೂ.ಗೆ ಸಾಲ ಪಡೆದಿದ್ದ ವ್ಯಕ್ತಿ ಜನವರಿಯಲ್ಲಿ ಒಟ್ಟು 2.36 ಲಕ್ಷ ರೂ. ಪಾವತಿಸಿ ಮಾಡಿದ್ದಾರೆ. ಆದರೂ ಹಣ ಪಾವತಿ ಮಾಡಿದ ನಂತರವೂ ಇತರ ರಿಕವರಿ ಏಜೆಂಟ್‌ಗಳಿಂದ ಕರೆಗಳು, ಬೆದರಿಕೆ ಕರೆಗಳು ಬರಲಾರಂಭಿಸಿದವು. ವ್ಯಕ್ತಿಯ ಪತ್ನಿಯ ಫೋಟೋ ಅಶ್ಲೀಲವಾಗಿ ಬದಲಾಯಿಸಿ ಬೆದರಿಕೆ ಮಾಡಲಾಗುತ್ತಿದೆ ಎಂದು ದೂರುದಾರರು ಹೇಳಿದ್ದಾರೆ.

ಪತ್ನಿಯ ಅಶ್ಲೀಲ ಫೋಟೋವನ್ನು ವ್ಯಕ್ತಿಯ ಸಂಬಂಧಿಕರಿಗೆ ಇಮೇಲ್ ಮಾಡಲಾಗಿದೆ. ಸೈಬರ್ ಅಪರಾಧಿಗಳು ತನಗೆ ಮತ್ತು ಅವರ ಕುಟುಂಬಕ್ಕೆ ಕಿರುಕುಳ ನೀಡುವುದನ್ನು ಮುಂದುವರೆಸಿದ ನಂತರ ದೂರುದಾರರು ಪೊಲೀಸರನ್ನು ಸಂಪರ್ಕಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: