ಇತ್ತೀಚೆಗೆ ಚೀನಾದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಕೆಲ ನಗರಗಳಲ್ಲಿ ಲಾಕ್ ಡೌನ್ ಕೂಡ ಘೋಷಿಸಲಾಗಿದೆ. ಅದಲ್ಲದೆ ಕೋವಿಡ್-19 ರೂಪಾಂತರಿಗಳಿಂದ ಕಂಗೆಟ್ಟಿರುವ ವಿಶ್ವದ ಜನತೆಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಇಂಗ್ಲೆಂಡ್‌ನಲ್ಲಿ ʼಎಕ್ಸ್‌ಇʼ (XE) ಎಂಬ ಹೊಸ ರೂಪಾಂತರಿ ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಫೋಟಕ ಮಾಹಿತಿ ಹೊರಹಾಕಿದೆ.
ಯುಕೆ ಯಲ್ಲಿ ಕೊರೊನಾ ರೂಪಾಂತರಿ ʼಎಕ್ಸ್‌ಇʼ ಪತ್ತೆಯಾಗಿದೆ. ಇದು ಓಮಿಕ್ರಾನ್ ಬಿಎ.1, ಬಿಎ.2ನ ಮರು ಸಂಯೋಜಕವಾಗಿದೆ. ಈ ಹೊಸ ರೂಪಾಂತರಿ, ಓಮಿಕ್ರಾನ್‌ಗಿಂತಲೂ ವೇಗವಾಗಿ ಹರಡಬಲ್ಲದು ಎಂದು ಡಬ್ಲ್ಯೂಎಚ್‌ಒ ಮಾಹಿತಿ ನೀಡಿದೆ.
ಹೊಸ ರೂಪಾಂತರಿ ಎಕ್ಸ್‌ಇ, ಇಂಗ್ಲೆಂಡ್‌ನಲ್ಲಿ ಜ.19ರಂದು ಮೊದಲ ಬಾರಿಗೆ ದೃಢಪಟ್ಟಿದೆ. ದೇಶದಲ್ಲಿ ಈವರೆಗೆ 637 ಪ್ರಕರಣಗಳು ದೃಢಪಟ್ಟಿವೆ ಎಂದು ತಜ್ಞರು ತಿಳಿಸಿದ್ದಾರೆ.
ಹೊಸ ತಳಿಯು ರೋಗದ ಗುಣಲಕ್ಷಣ, ತೀವ್ರತೆ ಮತ್ತು ಪ್ರಸರಣದಲ್ಲಿ ಓಮಿಕ್ರಾನ್‌ಗೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸಗಳಿವೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.