ರಂಜಾನ್ ಉಪವಾಸ ಪ್ರಾರಂಭ; ಯಾವಾಗಿನಿಂದ ಪ್ರಾರ್ಥನೆ , ಎಂದು ಹಬ್ಬ? ಇಲ್ಲಿದೆ ನೋಡಿ ಮಾಹಿತಿ

ಯುಗಾದಿ ದಿನವಾದ ಇಂದು ಹಿಂದೂಗಳು ಹಬ್ಬ. ಈ ಹಬ್ಬ ಚಂದ್ರಮಾನ ಯುಗಾದಿ ಎಂದೇ ಪ್ರಸಿದ್ಧಿ. ಪಾಡ್ಯ ಚಂದ್ರ ಎಂದೆ ಇಂದಿನ ಚಂದ್ರ ಪ್ರಸಿದ್ಧಿ. ದೇವರ ದರ್ಶನ ಮಾಡಿ ತಂದೆ, ತಾಯಿ, ಹಿರಿಯರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಇಂದಿನ ಚಂದ್ರ ಕಂಡರೆ ಚಂದ. ಇಂದು ಹಿಂದುಗಳ ಹಬ್ಬ ಮಾಡಿದ ಚಂದಿರ, ನಾಳೆ ಮುಸ್ಲಿಂಮರ ಹಬ್ಬಕ್ಕೆ ನಾಂದಿ . ಏಕೆಂದರೆ ಪ್ರಕೃತಿಯ ನಿಷ್ಪಕ್ಷಪಾತಿ. ಪ್ರಕೃತಿಯಲ್ಲಿ ತಾರತಮ್ಯವಿಲ್ಲ. ನಾಳೆ ಚಂದಿರನ ದರ್ಶನದಿಂದ ರಂಜಾನ್ ಉಪವಾಸ ಪ್ರಾರಂಭವಾಗಲಿದೆ.

ಪವಿತ್ರ ರಂಜಾನ್ ತಿಂಗಳ ಚಂದ್ರದರ್ಶನವಾದ್ದರಿಂದ ಬೆಂಗಳೂರು, ದ.ಕ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ರವಿವಾರದಿಂದ (ಎ.3) ಉಪವಾಸ ಆಚರಣೆ ಮಾಡಲು ಹಿಲಾಲ್ ಸಮಿತಿ ಕರೆ ನೀಡಿದೆ.

ನಾಳೆಯಿಂದ ಒಂದು ತಿಂಗಳ ಕಾಲ ರಂಜಾನ್ ಉಪವಾಸ ವ್ರತಾಚರಣೆ ನಡೆಯಲಿದೆ. ಹಾಗಾಗಿ ಮೇ 3 ರಂದು ರಂಜಾನ್ ಹಬ್ಬ ಆಚರಿಸಲಾಗುವುದು. ಇಂದು ರಾತ್ರಿಯಿಂದಲೇ ತಾರಾವೀಹ್ ನಮಾಜ್ ಮಾಡುವಂತೆಯೂ ತಿಳಿಸಲಾಗಿದೆ.

Leave A Reply

Your email address will not be published.