ರೈಲು ಅಪಘಾತ ತಪ್ಪಿಸಿದ ಧೀರ ಮಹಿಳೆ | ಉಟ್ಟಿದ್ದ ಕೆಂಪು ಸೀರೆಯೇ ಜನರ ಜೀವ ಉಳಿಸಲು ಮಾಡಿತು ಸಹಾಯ!
ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದಾಗಿ ರೈಲಿನಲ್ಲಿ ಪ್ರಯಾಣಿಸುತ್ತಿರುವವರ ಪ್ರಾಣ ಉಳಿದಿದೆ. ಈ ಘಟನೆ ನಡೆದಿರೋದು ಉತ್ತರಪ್ರದೇಶದ ಇಟಾ ಜಿಲ್ಲೆಯಲ್ಲಿ. ನಾಗ್ಲಾ ಗುಲೆರಿಯಾ ಎಂಬಲ್ಲಿ ರೈಲು ಹಳಿ ಡ್ಯಾಮೇಜ್ ಆಗಿತ್ತು. ಇದನ್ನು ಈ ಮಹಿಳೆ ಗಮನಿಸಿದ್ದಾಳೆ. ಆ ಜಾಗದಲ್ಲಿ ಕೂಡಲೇ ಮಹಿಳೆ ಕೆಂಪನೆಯ ಬಟ್ಟೆಯೊಂದನ್ನು ಹಾಕಿ ರೈಲು ಚಾಲಕನ ಗಮನ ಸೆಳೆಯಲು ಪ್ರಯತ್ನ ಪಟ್ಟು, ಜನರ ಜೀವ ಉಳಿಸಿದ್ದಾಳೆ.
ಓವ್ವತಿ ಎಂಬ ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಯಾರಿಗೂ ಅಪಾಯವಾಗಿಲ್ಲ.
ರೈಲು ಹಳಿ ಬಿರುಕು ಬಿಟ್ಟಿದೆ ಎಂದು ಗೊತ್ತಾದಾಗ ಕಾಕತಾಳೀಯವೆಂಬಂತೆ ಆ ಮಹಿಳೆ ಕೂಡಾ ಕೆಂಪು ಸೀರೆ ಉಟ್ಟಿದ್ದು ಸಹಾಯಕ್ಕೆ ಬಂದಿದೆ. ಚಾಲಕನಿಗೆ ಅರಿವಾಗಲಿ ಎಂಬ ಕಾರಣಕ್ಕೆ ರೈಲಿನತ್ತ ಓಡೋಡಿ ಬಂದು ಅಪಾಯವಿದೆ ಎಂಬ ಸಂದೇಶ ನೀಡಿದ್ದಾಳೆ. ಇದರಿಂದ ಎಚ್ಚೆತ್ತ ಲೋಕೋಪೈಲೆಟ್ ಎಮರ್ಜೆನ್ಸಿ ಬ್ರೇಕ್ ಒತ್ತಿ ರೈಲನ್ನು ನಿಲ್ಲಿಸಿದ್ದಾನೆ.
ನಂತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಹಾನಿಗೊಳಗಾಗಿದ್ದ ಹಳಿಯನ್ನು ದುರಸ್ಥಿ ಮಾಡಿಸಿದರು. ಆ ರೈಲಿನಲ್ಲಿ ಸುಮಾರು 150 ಮಂದಿ ಇದ್ದರು.
ರೈಲು ಚಾಲಕ ಆಕೆಗೆ ಧನ್ಯವಾದ ಹೇಳಿದ್ದಲ್ಲದೇ 100 ರೂಪಾಯಿ ಕೊಟ್ಟಿದ್ದಾನೆ. ಮೊದಲಿಗೆ ಬೇಡ ಅಂದರೂ ಅನಂತರ ಎಲ್ಲರ ಒತ್ತಾಗದಿಂದಾಗಿ ಹಣ ಪಡೆದಿದ್ದಾಳೆ. ಓವ್ವತಿಯ ಸಮಯಪ್ರಜ್ಞೆಯನ್ನು ಎಲ್ಲರೂ ಕೊಂಡಾಡಿದ್ದಾರೆ.