ಹೇಗಿದೆ ಗೊತ್ತಾ ಎಲೆಕ್ಟ್ರಿಕ್ ಹೀರೋ ಸ್ಪ್ಲೆಂಡರ್ ಬೈಕ್ ನ ಲುಕ್ !?? | ಭಾರತೀಯ ದ್ವಿಚಕ್ರವಾಹನ ಸವಾರರ ಕಣ್ಮಣಿಯ ಎಲೆಕ್ಟ್ರಿಕ್ ಅವತಾರಕ್ಕೆ ನೀವು ಕೂಡ ಮನಸೋಲುವುದು ಪಕ್ಕಾ
ಭಾರತೀಯರ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಈಗಾಗಲೇ ಆರಂಭವಾಗಿದೆ. ಗ್ರಾಹಕರು ಅವುಗಳನ್ನು ಖರೀದಿಸುವತ್ತ ಮುಖ ಮಾಡಿದ್ದಾರೆ. ಹೀಗಿರುವಾಗ ಭಾರತೀಯ ಗ್ರಾಹಕರ ನೆಚ್ಚಿನ ಬೈಕ್ ಹೀರೋ ಸ್ಪ್ಲೆಂಡರ್ ದ್ವಿಚಕ್ರ ವಾಹನದ ಎಲೆಕ್ಟ್ರಿಕ್ ಅವತಾರ ಮಾರುಕಟ್ಟೆಗೆ ಬಂದರೆ ಹೇಗಿರಬೇಡ ?? ಎಲ್ಲರೂ ಅದನ್ನು ಕೊಂಡುಕೊಳ್ಳಲು ಮುಗಿಬೀಳುವುದು ಖಂಡಿತ.
ವಿನಯ್ ರಾಜ್ ಸೇಮಶೇಖರ್ ಅವರು ಇತ್ತೀಚೆಗೆ ಭಾರತೀಯ ಗ್ರಾಹಕರ ಕಣ್ಣಿನ ಕಣ್ಮಣಿ ಎಂದೇ ಕರೆಯಲಾಗುವ ಹೀರೋ ಸ್ಪ್ಲೆಂಡರ್ ದ್ವಿಚಕ್ರ ವಾಹನದ ಇಲೆಕ್ಟ್ರಿಕ್ ಅವತಾರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಕಾಣುವ ಬೈಕ್ ಹೀರೋ ಮೊಟೊಕಾರ್ಪ್ ನಿಂದಲೇ ವಿನ್ಯಾಸಗೊಂಡಿರುವಂತಿದೆ. ಇಂತಹ ಪರಿಸ್ಥಿತಿಯಲ್ಲಿ, ಮುಂಬರುವ ದಿನಗಳಲ್ಲಿ ಹೀರೋ ನಿಜವಾಗಿಯೂ ಸ್ಪ್ಲೆಂಡರ್ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಿದರೆ, ಭಾರತದಲ್ಲಿ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯ ವಾತಾವರಣವೇ ಬದಲಾಗಲಿದೆ.
ಲಿಂಕ್ಡ್ಇನ್ ನಲ್ಲಿ ಇಲೆಕ್ಟ್ರಿಕ್ ಹೀರೋ ಸ್ಪ್ಲೆಂಡರ್ ಫೋಟೋವನ್ನು ಹಂಚಿಕೊಂಡ ವಿನಯ್, ” ಹೀರೋ ಸ್ಪ್ಲೆಂಡರ್ ಭಾರತೀಯ ಗ್ರಾಹಕರ ಅಗತ್ಯತೆಯಾಗಿ ಮಾರ್ಪಟ್ಟಿದೆ. ಇದರ ಕಾರ್ಯಕ್ಷಮತೆ ಅದ್ಭುತವಾಗಿದ್ದು, ಇದಕ್ಕೆ ಎಂದಿಗೂ ವಯಸ್ಸಾಗುವುದಿಲ್ಲ. ಇದರ ವಿನ್ಯಾಸದಲ್ಲಿಯೂ ನೀವು ಯಾವುದೇ ನ್ಯೂನತೆಯನ್ನು ಕಾಣುವುದಿಲ್ಲ. ಇದರ ಪ್ರತಿಯೊಂದು ಭಾಗವು ಅತ್ಯಗತ್ಯ ಸಾಬೀತಾಗಲಿದೆ ಮತ್ತು ಪರಿಣಾಮಕಾರಿಯಾಗಿದೆ. ಈ ಬೈಕ್‌ನಲ್ಲಿ ನೀವು ಸಾಕಷ್ಟು ಸ್ಥಳಾವಕಾಶವನ್ನು ಪಡೆಯುವಿರಿ” ಎಂದು ಬರೆದುಕೊಂಡಿದ್ದಾರೆ.
ಪ್ರಸ್ತುತ ವಿನಯ್ ಹಂಚಿಕೊಂಡ ಬೈಕ್ ನ ಚಿತ್ರ ಒಂದು ಡಿಜಿಟಲ್ ರೆಂಡರ್ ಆಗಿದೆ. ಇದರಲ್ಲಿ ವಿನಯ್ ಬೈಕ್ ನ ಬಹುತೇಕ ಭಾಗಗಳನ್ನು ಹಳೆ ಪೆಟ್ರೋಲ್ ನಿಂದ ಚಾಲಿತ ಸ್ಪ್ಲೆಂಡರ್ ಬೈಕ್ ರೀತಿಯೇ ತೋರಿಸಿದ್ದಾರೆ. ಬೈಕ್ ನ ಇಂಜಿನ್ ಭಾಗದಲ್ಲಿ ಕಪ್ಪು ಬಣ್ಣದ ಬ್ಯಾಟರಿ ಇರುವುದನ್ನು ತೋರಿಸಲಾಗಿದೆ. ಇದರಲ್ಲಿ ಇಂಜಿನ್ ಜೊತೆಗೆ ಗೇರ್ ಬಾಕ್ಸ್ ಅನ್ನು ಕೂಡ ತೆಗೆದುಹಾಕಲಾಗಿದೆ. ಈ ಬೈಕ್ ಒಂದು ಇಲೆಕ್ಟ್ರಿಕ್ ಬೈಕ್ ಆಗಿದೆ ಎಂಬುದನ್ನು ತೋರಿಸಲು, ಬೈಕ್ ನ ಬಹುತೇಕ ಭಾಗಗಳ ಮೇಲೆ ನೀಲಿ ಬಣ್ಣದ ಪಟ್ಟಿಗಳನ್ನು ತೋರಿಸಲಾಗಿದ್ದು, ಇದು ಬೈಕ್ ಅನ್ನು ನೋಡಲು ತುಂಬಾ ಆಕರ್ಷಕವನ್ನಾಗಿಸಿದೆ.
ತುಂಬಾ ಪವರ್ಫುಲ್ ಆಗಿದೆ ಇಲೆಕ್ಟ್ರಿಕ್ ಸ್ಪ್ಲೆಂಡರ್
ಹೀರೋ ಸ್ಪ್ಲೆಂಡರ್ ಮೋಟರ್ ಸೈಕಲ್ ನ ರೆಂಡರ್ ಬೈಕ್ ನಲ್ಲಿ 9 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅಳವಡಿಸಿರುವುದನ್ನು ತೋರಿಸಲಾಗಿದೆ. ಇದು ಬೈಕ್ ನ ಹಿಂಭಾಗದ ವ್ಹೀಲ್ ಗೆ ಸಾಕಷ್ಟು ಶಕ್ತಿ ಒದಗಿಸಲಿದೆ. ಈ ಬೈಕ್ ಜೊತೆಗೆ ಬೇರ್ಪಡಿಸುವ 2 ಕಿಲೋವ್ಯಾಟ್ ನ ಎರಡು ಬ್ಯಾಟರಿಗಳನ್ನು ನೀಡಲಾಗಿದೆ ಮತ್ತು ಅವು ಗಾತ್ರದಲ್ಲಿ ತುಂಬಾ ಚಿಕ್ಕದಾಗಿರಲಿವೆ ಎನ್ನಲಾಗಿದೆ. ಪೆಟ್ರೋಲ್ ಬೈಕ್ ನಲ್ಲಿ ಪೆಟ್ರೋಲ್ ತುಂಬಿಸುವ ಜಾಗದಲ್ಲಿಯೇ ಇದರ ಚಾರ್ಜಿಂಗ್ ಪಾಯಿಂಟ್ ತೋರಿಸಲಾಗಿದೆ. 6 ಕಿಲೋವ್ಯಾಟ್-ಅವರ್ ಬ್ಯಾಟರಿಯ ಜೊತೆಗೆ ಈ ಬೈಕ್ ಒಂದೇ ಚಾರ್ಜ್ ನಲ್ಲಿ 180 ಕಿ.ಮೀ ರೇಂಜ್ ನೀಡುತ್ತದೆ. ಇದು 4 ಕಿಲೋವ್ಯಾಟ್-ಅವರ್ ಬ್ಯಾಟರಿಯಲ್ಲಿ 120 ಕಿ.ಮೀ ರೇಂಜ್ ನೀಡಲಿದೆ.