ಪತ್ನಿಯನ್ನು ‘ ಟೊಮ್ಯಾಟೊ’ ಎಂದು ಚುಡಾಯಿಸಿದ ನೆರೆಮನೆಯ 56 ವರ್ಷದ ವೃದ್ಧ | ಆಮೇಲೆ ಪತಿಯಿಂದ ನಡೆದದ್ದು ಮಾತ್ರ ಘೋರ ದುರಂತ !
ಯಾರೇ ಗಂಡನಿಗೂ ತನ್ನ ಹೆಂಡತಿಯನ್ನು ಅಸಹ್ಯಕರ ದೃಷ್ಟಿಯಲ್ಲಿ ನೋಡುವುದು ಇಷ್ಟ ಪಡುವುದಿಲ್ಲ. ಆದರೆ ಇಲ್ಲೊಬ್ಬ ನೆರೆ ಮನೆಯ ವೃದ್ಧನೋರ್ವ ( 56 ವರ್ಷ ) ಪಕ್ಕದ್ಮನೆಯ ವ್ಯಕ್ತಿಯ ಹೆಂಡತಿ ಯನ್ನು ‘ಟೊಮ್ಯಾಟೊ’ ಎಂದು ಚುಡಾಯಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪತಿ ಆತನನ್ನು ಕೊಲೆ ಮಾಡಿದ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬ್ರಹ್ಮದೇವ್ದಾಸ್ನ ನೆರೆ ಮನೆಯಲ್ಲಿ ವಾಸವಾಗಿದ್ದ ಮಹೇಶ್ ದಾಸ್ ಎಂಬಾತ ಬ್ರಹ್ಮದೇವ್ದಾಸ್ನ ಪತ್ನಿಯನ್ನು ‘ಟೊಮ್ಯಾಟೊ’ ಎಂದು ಚುಡಾಯಿಸುತ್ತಿದ್ದ. ಈ ಬಗ್ಗೆ ಆಕೆ ಪತಿ ಬಳಿ ದೂರಿಕೊಂಡಿದ್ದಳು. ಇದರಿಂದ ಕೋಪಗೊಂಡಿರುವ ಪತಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಹೊಡೆತದಿಂದ ಮಹೇಶ್ ಪ್ರಜ್ಞೆ ತಪ್ಪಿಬಿದ್ದಿದ್ದಾನೆ. ಅನಂತರ ಆತನನ್ನು ವೈದ್ಯರ ಬಳಿ ಕರೆದೊಯ್ಯಲಾಗಿದೆ. ಈ ವೇಳೆ ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ಹೇಳಿದ್ದಾರೆ.