ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಟೆಲಿಕಾಂ ಕಂಪನಿಗಳ ಮೇಲೆ ದೊಡ್ಡ ಕ್ರಮ ಕೈಗೊಂಡಿದ್ದು ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಹೊಸ ಆದೇಶವನ್ನು ಹೊರಡಿಸಿದೆ, ಅದರ ಪ್ರಕಾರ, ಕಂಪನಿಗಳು ಇಡೀ ತಿಂಗಳು ಮಾನ್ಯವಾಗಿರುವ ಕನಿಷ್ಠ ಒಂದು ಯೋಜನೆಯನ್ನು ಮಾಡಬೇಕು. ಇದಕ್ಕಾಗಿ ಟೆಲಿಕಾಂ ಕಂಪನಿಗಳಿಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ.
ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಕನಿಷ್ಠ ಒಂದು ವಿಶೇಷ ಸುಂಕದ ವೋಚರ್ ಮತ್ತು ಒಂದು ವಿಶೇಷ ರೀಚಾರ್ಜ್ ಪ್ಲಾನ್ ಅನ್ನು ಇಡೀ ತಿಂಗಳು ವ್ಯಾಲಿಡಿಟಿಯೊಂದಿಗೆ ಇಟ್ಟುಕೊಳ್ಳಬೇಕು ಎಂದು ಹೇಳಿದೆ. ತಿಂಗಳ ಕೊನೆಯವರೆಗೆ ಈ ಸೇವೆಯನ್ನು ನೀಡಬೇಕು ಎಂದು ತಿಳಿಸಿದೆ.
ಇಲ್ಲಿಯವರೆಗೆ ಬಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು 28 ದಿನಗಳ ವ್ಯಾಲಿಡಿಟಿಯನ್ನು ತಿಂಗಳ ವ್ಯಾಲಿಡಿಟಿ ಯೋಜನೆಯಾಗಿ ಗ್ರಾಹಕರಿಗೆ ನೀಡುತ್ತಿವೆ. ಇದರಿಂದಾಗಿ ಗ್ರಾಹಕರು ಸುಮಾರು ಒಂದು ವರ್ಷದಲ್ಲಿ 13 ರೀಚಾರ್ಜ್‌ಗಳನ್ನು ಮಾಡಬೇಕು. ಇದರಿಂದ ಬಳಕೆದಾರರಿಗೆ ಟೆಲಿಕಾಂ ಕಂಪನಿ ಮೋಸ ಮಾಡುತ್ತಿರುವುದಾಗಿ ಎಂಬಂತೆ ಹಲವಾರು ದೂರುಗಳನ್ನು ಟ್ರಾಯ್ ಸ್ವೀಕರಿಸಿತ್ತು.
ಹಾಗಾಗಿ, ಭಾರತದಲ್ಲಿನ ಟೆಲಿಕಾಂ ಕಂಪೆನಿಗಳು 28 ದಿನದ ಬದಲಾಗಿ, 30 ದಿನಗಳ ಮಾನ್ಯತೆಯ ಅವಧಿಯನ್ನು ಒದಗಿಸುವ ಕನಿಷ್ಠ ಒಂದು ಸುಂಕ ಯೋಜನೆಯನ್ನು ಒಳಗೊಂಡಿರುವುದನ್ನು ಕಡ್ಡಾಯಗೊಳಿಸಿ ಆದೇಶವನ್ನು ಎರಡು ತಿಂಗಳ ಹಿಂದೆಯಷ್ಟೇ ಹೊರಡಿಸಿತ್ತು.
ಹೆಚ್ಚಿನ ಟೆಲಿಕಾಂ ಕಂಪನಿಗಳು ಒಂದು ತಿಂಗಳ ರೀಚಾರ್ಜ್ ಹೆಸರಿನಲ್ಲಿ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಾ ಬಂದಿದೆ. ಜಿಯೋ ಈ ಯೋಜನೆಯನ್ನು ಪ್ರಾರಂಭಿಸಿದ್ದರೂ, ಅದೇ ಸಮಯದಲ್ಲಿ ವೊಡಾಫೋನ್ ಐಡಿಯಾ ಮತ್ತು ಏರ್ಟೆಲ್ನಂತಹ ಇತರ ಟೆಲಿಕಾಂ ಕಂಪನಿಗಳು 60 ದಿನಗಳಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಕಾಗುತ್ತದೆ.
ತಿದ್ದುಪಡಿಯನ್ನು ಜಾರಿಗೊಳಿಸುವುದರೊಂದಿಗೆ, ಟೆಲಿಕಾಂ ಚಂದಾದಾರರು ಸೂಕ್ತವಾದ ಮಾನ್ಯತೆ ಮತ್ತು ಅವಧಿಯ ಸೇವಾ ಕೊಡುಗೆಗಳನ್ನು ಆಯ್ಕೆ ಮಾಡಲು ಹೆಚ್ಚಿನ ಆಯ್ಕೆಗಳನ್ನು ಹೊಂದಿರುತ್ತಾರೆ ಎಂದು TRAI ಹೇಳಿದೆ.