ಸುಳ್ಯ: ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕನ್ನ ಹಾಕಿದ ಕಳ್ಳರು !! | ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಕಳವು

ಇತ್ತೀಚೆಗೆ ಸುಳ್ಯದ ಮನೆಯೊಂದರಲ್ಲಿ ನಡೆದ ದರೋಡೆ ಪ್ರಕರಣ ಮಾಸುವ ಮುನ್ನವೇ ಇದೀಗ ಕೃಷಿ ಪತ್ತಿನ ಸಹಕಾರಿ ಸಂಘದ ಹೊಸ ಕಟ್ಟಡಕ್ಕೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಮುರುಳ್ಯ-ಎಣ್ಣೂರು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದಿದೆ.

ಅಲೆಕ್ಕಾಡಿಯಲ್ಲಿರುವ ಮುರುಳ್ಯ-ಎಣ್ಣೂರು ಕೃಷಿ ಪತ್ತಿನ ಸಹಕಾರಿ ಸಂಘ ಕಟ್ಟಡದಲ್ಲಿರುವ 2 ಮಾನಿಟರ್, 1 ಕಂಪ್ಯೂಟರ್ ಸೇರಿದಂತೆ ಎಲ್ ಇಡಿ ಸ್ಮಾರ್ಟ್ ಟಿವಿಗಳು ಸೇರಿದಂತೆ 1.52 ಲಕ್ಷದ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳುವು ಮಾಡಲಾಗಿದೆ. ಮಾರ್ಚ್ 18 ರಿಂದ ಮಾರ್ಚ್ 30ರೊಳಗೆ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ನಿನ್ನೆ ಈ ಘಟನೆ ಬೆಳಕಿಗೆ ಬಂದಿದೆ.

ಅಲೆಕ್ಕಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಬಗ್ಗೆ ದೂರು ನೀಡಿದ್ದು, ಬೆಳ್ಳಾರೆ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave A Reply