ಈ ಕಾಲ ಬಲು ದುಬಾರಿಯಪ್ಪಾ… ದುಬಾರಿ !!|ಲಕ್ಸ್ ಸೋಪ್, ಸರ್ಫ್ ಎಕ್ಸೆಲ್ ಮತ್ತು ರಿನ್ ಮುಂತಾದ ಉತ್ಪನ್ನಗಳ ಬೆಲೆ ಏರಿಕೆ!!

ನವದೆಹಲಿ:ಈ ಕಾಲ ‘ದುಬಾರಿ ಯಪ್ಪಾ ದುಬಾರಿ’.ಯಾಕಂದ್ರೆ ದಿನ ಬಳಕೆಯ ವಸ್ತುಗಳಿಂದ ಹಿಡಿದು ಬೆಲೆ ಬಾಳುವ ವಸ್ತುಗಳವರೆಗೂ ದರ ಹೆಚ್ಚುತ್ತಲೇ ಇದೆ.ಇದಕ್ಕೆಲ್ಲ ಕಾರಣ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ.ಇದೀಗ ಪ್ರತಿಸ್ಪರ್ಧಿ FMCG ಬ್ರ್ಯಾಂಡ್‌ಗಳ ಹೆಜ್ಜೆಗಳನ್ನು ಅನುಸರಿಸಿ,ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ತನ್ನ ಶ್ರೇಣಿಯಲ್ಲಿ ವಿವಿಧ ಶುಚಿಗೊಳಿಸುವ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳ ದರಗಳನ್ನು ಹೆಚ್ಚಿಸಿದೆ.

ಲಕ್ಸ್ ಸೋಪ್, ಸರ್ಫ್ ಎಕ್ಸೆಲ್ ಮತ್ತು ರಿನ್ ಮುಂತಾದ ಬ್ರಾಂಡ್‌ಗಳ ಅಡಿಯಲ್ಲಿ ಮಾರಾಟವಾಗುವ ಉತ್ಪನ್ನಗಳ ದರವನ್ನು FMCG ತಯಾರಕರು ಹೆಚ್ಚಿಸಿದ್ದು,ಉಕ್ರೇನ್ -ರಷ್ಯಾ ಯುದ್ಧದಿಂದ ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾದದ್ದೇ ಇದಕ್ಕೆ ಕಾರಣವಾಗಿದೆ. ಹೆಚ್ಚುತ್ತಿರುವ ಇನ್ಪುಟ್ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು FMCG ಕಂಪನಿಗಳ ಮೇಲೆ ಒತ್ತಡ ಹೇರಿದ್ದು,ಸಾಬೂನು ಮತ್ತು ಮಾರ್ಜಕಗಳಂತಹ ಹಲವಾರು ಇತರ ಉತ್ಪನ್ನಗಳ ತಯಾರಿಕೆಯಲ್ಲಿ ಕಚ್ಚಾ ವಸ್ತುಗಳನ್ನು ಬಳಸಲಾಗುವುದರಿಂದ ಬೆಲೆ ಏರಿಕೆ ಮಾಡಿದೆ.


Ad Widget

Ad Widget

Ad Widget

ಫೆಬ್ರವರಿ 2022 ರಲ್ಲಿ HUL ಲೈಫ್‌ಬಾಯ್ ಮತ್ತು ಡವ್ ಸೋಪ್‌ಗಳ ಬೆಲೆಗಳನ್ನು ಕ್ರಮವಾಗಿ 6% ಮತ್ತು 4% ರಷ್ಟು ಹೆಚ್ಚಿಸಿದೆ. ಕೋಟಾಕ್ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್ (KIE) ವರದಿಯ ಪ್ರಕಾರ, ಕಂಪನಿಯು ಬ್ರಾಂಡ್‌ಗಳಾದ್ಯಂತ ಫೇಸ್‌ವಾಶ್‌ನ ಬೆಲೆಗಳನ್ನು 9% ವರೆಗೆ ಹೆಚ್ಚಿಸಿದೆ. ಇತರ ಉತ್ಪನ್ನಗಳಾದ ವಿಮ್ ಬಾರ್ ಮತ್ತು ಲಿಕ್ವಿಡ್ ಮತ್ತು ಸರ್ಫ್ ಎಕ್ಸೆಲ್ ಬ್ರಾಂಡ್‌ನ ಕೆಲವು ಉತ್ಪನ್ನಗಳ ಬೆಲೆಗಳನ್ನು ಸಹ ಹೆಚ್ಚಿಸಲಾಗಿದೆ.ಅಲ್ಲದೆ, ಮಾರ್ಚ್ 2022 ರಲ್ಲಿ, HUL ಬ್ರೂ ಕಾಫಿ ಪುಡಿಯ ದರವನ್ನು 7% ವರೆಗೆ ಹೆಚ್ಚಿಸಲು ನಿರ್ಧರಿಸಿತು, ಆದರೆ ಬ್ರೂ ಗೋಲ್ಡ್ ಕಾಫಿ ಜಾರ್‌ಗಳು 4% ವರೆಗೆ ದುಬಾರಿಯಾಗಿದೆ. ಮತ್ತೊಂದೆಡೆ, ಬ್ರೂ ಇನ್‌ಸ್ಟಂಟ್ ಕಾಫಿ ಪೌಚ್‌ಗಳ ಬೆಲೆಯನ್ನು ಶೇಕಡಾ 6.66 ರಷ್ಟು ಹೆಚ್ಚಿಸಲಾಗಿದೆ.

ಕಂಪನಿಯು ಹಣದುಬ್ಬರದ ಒತ್ತಡವನ್ನು ಎದುರಿಸುತ್ತಿದೆ ಮತ್ತು ಹಣದುಬ್ಬರದ ವಾತಾವರಣವನ್ನು ನ್ಯಾವಿಗೇಟ್ ಮಾಡುವಲ್ಲಿ ವಿಶ್ವಾಸ ಹೊಂದಿದೆ ಎಂದು HUL ತಿಳಿಸಿದೆ. HUL ಗಿಂತ ಮೊದಲು, ಡಾಬರ್, ನೆಸ್ಲೆ, ಮತ್ತು ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ (GCPL) ನಂತಹ ಹಲವಾರು FMCG ಬ್ರ್ಯಾಂಡ್‌ಗಳು, ಇನ್ನಿತರ ಬ್ರಾಂಡ್ ತಮ್ಮ ಸಾಲಿನಲ್ಲಿ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಿವೆ.

Leave a Reply

error: Content is protected !!
Scroll to Top
%d bloggers like this: