ಹಿಂದೂ- ಮುಸ್ಲಿಮ್ ಬಾಂಧವ್ಯ ಸಾರುವ ಜಾತ್ರೆ| ರಾಜ್ಯಕ್ಕೇ ಮಾದರಿಯಾದ ಈ ಜಾತ್ರೆ ನಡೆಯೋದಾದರೂ ಹೇಗೆ ಎಲ್ಲಿ ಗೊತ್ತಾ?
ರಾಮ ರಹೀಮ ಎಲ್ಲರೂ ಒಂದೇ ಎನ್ನುವ ಜನ ಈಗ ಬೇರೆ ಬೇರೆ ಎಂದು ಜಗಳವಾಡುತ್ತಿದ್ದಾರೆ. ಈ ನಾಡಿನಲ್ಲಿ ಹಿಂದು ಮುಸ್ಲಿಮ್ ಒಂದಾಗಿ ಎಷ್ಟೊ ಹಬ್ಬಗಳನ್ನು ಆಚರಿಸುತ್ತಾರೆ. ಅದರೆ ಈಗ ಹಿಜಾಬ್ ಮತ್ತು ಹಲಾಲ್ ಜಗಳದಲ್ಲಿ ಬಾಂಧವ್ಯ ಹಡಿದು ಹೋಗುತ್ತಿದೆಯೇ ? ಇಲ್ಲಾ ಎನ್ನುತ್ತಿದ್ದೆ ಈ ಜಾತ್ರೆ. ಈ ಜಾತ್ರೆಯ ವೈಶಿಷ್ಟ್ಯ ಏನು ನೋಡಿ. ಈ ಬಾರಿಯೂ ಈ ಜಾತ್ರೆ ಸ್ನೇಹ ಸೌಹಾರ್ದತೆಯಿಂದ ನಡೆಯಿತು.
ದಾರ್ಶನಿಕ ವ್ಯಕ್ತಿ, ವಚನಕಾರ ಅಲ್ಲಮ ಪ್ರಭು ಅವರ ಹೆಸರಲ್ಲಿ ನಡೆಸುವ ಜಾತ್ರೆಯಲ್ಲಿ ಹಿಂದೂ, ಮುಸ್ಲಿಂ ಸಹೋದರತ್ವ ಸಾರಲಾಗಿದೆ. ಬೀದರ್ ತಾಲೂಕಿನ ಅಷ್ಟೂರು ಎಂಬ ಕುಗ್ರಾಮದಲ್ಲಿ ಶ್ರೇಷ್ಠ ವಚನಕಾರ ಅಲ್ಲಮ ಪ್ರಭುವಿನ ಜಾತ್ರೆ ನಡೆಯುತ್ತದೆ. ಹಿಂದೂ ಹಾಗೂ ಮುಸ್ಲಿಮರು ಸೇರಿ ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷ.
ಹಿರಿಯರ ಮಾರ್ಗದರ್ಶನದಂತೆ ಅಷ್ಟೂರು ಗ್ರಾಮದಲ್ಲಿ 3 ದಿನಗಳ ಕಾಲ ಈ ವಿಶೇಷ ಜಾತ್ರೆ ನಡೆಯುತ್ತದೆ. ಎರಡು ಧರ್ಮದವರೂ ಒಂದೇ ಸ್ಥಳದಲ್ಲಿ ಪ್ರಾರ್ಥನೆ ಮತ್ತು ಪೂಜೆ ಎರಡನ್ನೂ ಮಾಡಲಾಗುತ್ತದೆ. ಈ ವರ್ಷವೂ ಅವರ ಧರ್ಮ, ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ, ಜನರು ಒಂದೇ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಜಾತ್ರೆ ಹಿಂದೂಗಳು ಅಲ್ಲಮ ಪ್ರಭು ದೇವರು ಎಂದು ಪೂಜಿಸುವ ಹಾಗೂ ಮುಸ್ಲಿಮರು ಅಹೆಮದ್ ಶಾ ವಲಿ ದೇವರು ಎಂದು ಪ್ರಾರ್ಥಿಸುವ ಈ ದೇವರ ಜಾತ್ರೆ ಹಿಂದೂ- ಮುಸ್ಲಿಮರ ಸಹಯೋಗದಲ್ಲಿ ನಡೆಯುತ್ತದೆ. ಈ ವರ್ಷವೂ ಸೌಹಾರ್ದಯುತವಾಗಿ ನಡೆದಿದೆ.
ಅಷ್ಟೂರು ಜಾತ್ರೆ ಪ್ರಯುಕ್ತ ನಡೆದ ಅಂತಿಮ ಕುಸ್ತಿ ಪಂದ್ಯದಲ್ಲಿ ಗೆದ್ದ ನೆರೆಯ ಮಹಾರಾಷ್ಟ್ರದ ಲಾತೂರಿನ ಪೈಲ್ವಾನ್ ದೀಪಕ್ ಕಲಾಲ್ ‘ಅಷ್ಟೂರು ಕೇಸರಿ’ ಬಿರುದು ಮುಡಿಗೇರಿಸಿಕೊಂಡರು.