ಐಪಿಎಲ್ ಪಂದ್ಯದಲ್ಲಿ ಶಮಿಯನ್ನು ಅಭಿನಂದಿಸಿದ ಅಮೆರಿಕಾದ ಖ್ಯಾತ ‘ನೀಲಿ ಚಿತ್ರ ತಾರೆ’ : ಎಲ್ಲರ ಗಮನ ಸೆಳೆದ ಟ್ವೀಟ್ !!!

ಸೋಮವಾರ ಮುಂಬೈನಲ್ಲಿ ನಡೆದ ಉಭಯ ತಂಡಗಳ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದೆ. ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಉತ್ತಮ ಪ್ರದರ್ಶನಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಆದರೆ ವಿಶೇಷ ಏನೆಂದರೆ ಅಮೆರಿಕಾದ ಖ್ಯಾತ ನೀಲಿಚಿತ್ರ ತಾರೆ ( ಪೋರ್ನ್ ಸ್ಟಾರ್ ) ಶಮಿ ಅವರಿಗೆ ಅಭಿನಂದನೆ ಸಲ್ಲಿಸಿರುವುದು ಎಲ್ಲರ ಗಮನ ಸೆಳೆದಿದೆ.


Ad Widget

Ad Widget

Ad Widget

ಮೂರು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಮೊಹಮ್ಮದ್ ಶಮಿ ಅದ್ಭುತವಾಗಿ ತಮ್ಮ ಪ್ರದರ್ಶನದ ಆಟ ಆಡಿದ್ದಾರೆ. ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸುವಲ್ಲಿ ಶಮಿ ಅವರ ಪಾತ್ರ ಗಮನಾರ್ಹವಾಗಿತ್ತು. ಸಹಜವಾಗಿಯೇ ಬೌಲರ್ ಶಮಿಗೆ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಅಲ್ಲದೆ ಶಮಿಯನ್ನು ಉಲ್ಲೇಖಿಸಿರುವ
ಅಮೆರಿಕದ ಪೋರ್ನ್‌ಸ್ಟಾರ್ ಕೇಂಡ್ರಾ ಲಸ್ಟ್ ಅವರ ಅಭಿನಂದನಾ ಟ್ವೀಟ್ ಎಲ್ಲರ ಗಮನ ಸೆಳೆದಿದೆ.

ಮೊಹಮ್ಮದ್ ಶಮಿ ಅವರ ಸ್ವಾಶ್‌ಬಕ್ಲಿಂಗ್ ಪ್ರದರ್ಶನದ ನಂತರ, ಕೇಂಡ್ರಾ ಲಸ್ಟ್ ಕೂಡ ಟ್ವಿಟ್ಟರ್ ಮುಖಾಂತರ ಅವರನ್ನು ಕೊಂಡಾಡಿದ್ದಾರೆ, ಅಭಿನಂದಿಸಿದ್ದಾರೆ.

ಶಮಿಯ ಅದ್ಭುತ ಪ್ರದರ್ಶನವನ್ನು ಪೋರ್ನ್ ಸ್ಟಾರ್ ಹೊಗಳಿ ಉತ್ತುಂಗಕ್ಕೇರಿಸಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ಗೆ 159 ರನ್‌ಗಳ ಗುರಿಯನ್ನು ಲಕ್ನೋ ಸೂಪರ್ ಜೈಂಟ್ಸ್ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ತಂಡ 5 ವಿಕೆಟ್‌ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.

Leave a Reply

error: Content is protected !!
Scroll to Top
%d bloggers like this: