ಸರಕಾರಿ ಬಸ್ಸಿನಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ | ಪೊಲೀಸರಿಗೆ ಕಾಲ್ ಮಾಡಿದಾಗ ಓಡಿ ಹೋದ ಕಾಮುಕ|

0 16

ನಾರಿ ಮುನಿದರೆ ಮಾರಿ ಎಂಬ ಮಾತೊಂದು ಇದೆ. ಇದರರ್ಥ ನಾರಿ ಕೆಲವೊಂದು ಸಂದರ್ಭದಲ್ಲಿ ಸುಮ್ಮನಿದ್ದರೂ, ಸಿಟ್ಟು ಬಂದಾಗ ಮಾರಿ ರೀತಿಯಲ್ಲಿ ವರ್ತಿಸುತ್ತಾರೆ ಎಂದು. ಅದು ಈ ಒಂದು ಘಟನೆಯ ಮೂಲಕ ಸಾಬೀತಾಗಿದೆ. ಅನುಚಿತವಾಗಿ ವರ್ತಿಸಿದ ದುರುಳನನ್ನು ಯುವತಿಯೊಬ್ಬಳು ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೇರಳದ ಕರಿವೆಲ್ಲೂರಿನಲ್ಲಿ ನಡೆದಿದೆ.

ಕಣ್ಣೂರಿನಿಂದ ಕನ್ಹಂಗದ್ ಪ್ರದೇಶಕ್ಕೆ ಕೆಎಸ್‌ಆರ್‌ಟಿಸಿ ಮೂಲಕ ಕಣ್ಣೂರಿನ ಕರಿವೇಲೂರು ಮೂಲದ ಆರ್ .ಟಿ.ಆರತಿ ಎಂಬಾಕೆ ಪ್ರಯಾಣ ಮಾಡುತ್ತಿದ್ದಳು.

ಕೇರಳದಲ್ಲಿ ಖಾಸಗಿ ಬಸ್ ಗಳು ಸರ್ಕಾರದ ನೀತಿಯನ್ನು ವಿರೋಧಿಸಿ ಸ್ಟ್ರೈಕ್ ಮಾಡುತ್ತಿದ್ದ ಕಾರಣ ಕಡಿಮೆ ಇತ್ತು. ಹಾಗಾಗಿ ಇದ್ದ ಬಸ್ಸಲ್ಲೇ ಜನ ಪ್ರಯಾಣ ಮಾಡುತ್ತಿದ್ದು, ಸರ್ಕಾರಿ ಬಸ್ ತುಂಬಿ ತುಳುಕುತ್ತಿತ್ತು. ಈ ಸಂದರ್ಭವನ್ನೇ ತನ್ನ ಕಾಮ ತೀಟೆಗೆ ಉಪಯೋಗಿಸಿಕೊಳ್ಳಲು ಪ್ಲ್ಯಾನ್ ಮಾಡುತ್ತಾನೆ‌ ಈ ಕಾಮುಕ. ಹಾಗೆಯೇ ಆತ ಆರತಿ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ.

ಆರೋಪಿಯನ್ನು ರಾಜೀವ್ (52) ಎಂದು ಗುರುತಿಸಲಾಗಿದೆ. ಬಸ್ ನೀಲೇಶ್ವರಮ್‌ಗೆ ತೆರಳುತ್ತಿದ್ದಂತೆ ಆಕೆಯ ಜತೆ ರಾಜೀವ್ ಅನುಚಿತವಾಗಿ ವರ್ತಿಸಿದ್ದಾನೆ. ಅನೇಕ ಬಾರಿ ಆತನಿಗೆ ಆರತಿ ಎಚ್ಚರಿಕೆ ನೀಡಿದ್ದಾಳೆ‌ ತನ್ನ ನೀಚ ಕೆಲಸವನ್ನು ಆತ ಮುಂದುವರಿಸಿದ್ದಾನೆ. ಆರತಿಗೆ ಕಿರುಕುಳ ನೀಡುತ್ತಿದ್ದರೂ ಬಸ್ಸಿನಲ್ಲಿದ್ದ ಯಾರೊಬ್ಬರು ಕೂಡ ಅವಳಿಗೆ ಸಹಾಯ ಮಾಡಲಿಲ್ಲ.

ಆರತಿ ಕೂಡಲೇ ಪಿಂಕ್ ಪೊಲೀಸರಿಗೆ ಕಾಲ್ ಮಾಡಿ ಮಾಹಿತಿ ನೀಡುತ್ತಾಳೆ. ಇದು ಗೊತ್ತಾಗಿ ಬಸ್ಸಿನಿಂದಲೇ ಆ ವ್ಯಕ್ತಿ ಕವ್ಹಾಂಗದ್ ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆ ಬಸ್‌ನಿಂದ ಇಳಿದು ಆರೋಪಿ ಪರಾರಿಯಾಗುತ್ತಾನೆ. ಆತನನ್ನು ಯಾವುದೇ ಕಾರಣಕ್ಕೂ ಬಿಡಲೇಬಾರದು ಎಂದು ನಿರ್ಧಾರಕ್ಕೆ ಬರುವ ಆರತಿ, ಆತನನ್ನು ಅಟ್ಟಿಸಿಕೊಂಡು ಹೋಗುತ್ತಾಳೆ. ಅಲ್ಲದೆ, ಆರೋಪಿಯು ಮಿಸ್ ಆಗಬಾರದು ಅಂತಾ ಫೋಟೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳುತ್ತಾಳೆ. ಆರೋಪಿ ರಾಜೀವ್ ಲಾಟರಿ ಕೊಳ್ಳುವ ಗ್ರಾಹಕನಂತೆ ನಾಟಕವಾಡಿ, ಅಂಗಡಿ ಒಳಗೆ ಹೋದಾಗ ಸ್ಥಳೀಯರ ನೆರವಿನಿಂದ ಆತನನ್ನು ಆರತಿ ಹಿಡಿಯುತ್ತಾಳೆ. ಬಳಿಕ ಆತನನ್ನು ಕನ್ಹಾಂಗದ್ ಪೊಲೀಸರಿಗೆ ಒಪ್ಪಿಸುತ್ತಾಳೆ. ಆಕೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ರಾಜೀವ್‌ನನ್ನು ಪೊಲೀಸರು ಬಂಧಿಸುತ್ತಾರೆ.

Leave A Reply