ಅಲೆಗಳ ಹೊಡೆತಕ್ಕೆ ದಡ ಸೇರಿದ ವಿಚಿತ್ರ ಜೀವಿ!! ಮಾನವನ ಆಕಾರ-ಮಂಗನ ಬಾಲ!!
ಹಾಗಾದರೆ ನಾನ್ಯಾರು!?
ಪ್ರಾಚೀನ ಕಾಲದ ಕೆಲ ಪ್ರಾಣಿಗಳ ಹೆಸರು ಹಾಗೂ ಅವುಗಳ ಹಿನ್ನೆಲೆ ಕೇಳುವ ಇಂದಿನ ಪೀಳಿಗೆಯು ಅರೆಕ್ಷಣ ಬೆಚ್ಚಿ ಬೀಳುತ್ತಾರೆ. ಯಾರೆಂದರೆ ಆ ಕಾಲದ ಪ್ರಾಣಿಗಳ ರೂಪ, ಆಕಾರ ಎಲ್ಲವೂ ಚಿತ್ರ ವಿಚಿತ್ರವಾಗಿ ಮಾನವನ ಹೋಲುವ ರೀತಿಯಲ್ಲಿ ಕಾಣುತ್ತದೆ.ಉದಾಹರಣೆಗೆ ಡೈನೋಸರ್ ಎನ್ನುವ ಸರೀಸೃಪವೊಂದು ಪ್ರಾಚೀನ ಕಾಲದಲ್ಲಿ ಇತ್ತೆನ್ನುವುದಕ್ಕೆ ಅಳಿದುಳಿದ ಅವುಗಳ ಪಳೆಯುಳಿಕೆಗಳೇ ಸಾಕ್ಷಿ.
ಅಂತಹುದೆ ವಿಚಿತ್ರ ಜೀವಿಯೊಂದು ಕಡಲ ತೀರದಲ್ಲಿ ಪತ್ತೆಯಾಗಿದ್ದು ನೋಡುಗರನ್ನು ಕುತೂಹಲ ಕೆರಳಿಸಿದೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಕಡಲಕಿನಾರೆಯಲ್ಲಿ ಅಲೆಗಳ ಹೊಡೆತಕ್ಕೆ ಕೊಚ್ಚಿಕೊಂಡು ಬಂದಿದೆ. ಸದ್ಯ ಇದರ ವಿಡಿಯೋ ಒಂದು ಸಾಮಾಜಿಕ ಜಾಲತಣದಲ್ಲಿ ಹರಿದಾಡಿದ್ದು ಜಾಲತಾಣ ಪ್ರಿಯರ ಕುತೂಹಲಕ್ಕೂ ಕಾರಣವಾಗಿದೆ.
ಸರೀಸೃಪದಂತಹ ತಲೆಬುರುಡೆ, ವಿಚಿತ್ರ ಅಕಾರ, ಮಾನವನನ್ನೇ ಹೋಲುವ ಉದ್ದವಾದ ಉಗುರು, ಜೋಲು ಬಿದ್ದ ಕೈಕಾಲುಗಳನ್ನು ಹೊಂದಿದ್ದು ಅಲೆಕ್ಸ್ ಟಾನ್ ಎಂಬವರು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಚಿತ್ರ ಜೀವಿಯ ವಿಡಿಯೋ ಹರಿಯಬಿಟ್ಟಿದ್ದಾರೆ.