ವಿಚಿತ್ರ ಕಾನೂನು ತಂದ ಸರ್ಕಾರ!! ಇಲ್ಲಿ ಕೆಲಸ ಬೇಕಾದರೆ ಬಿಟ್ಟಿರಬೇಕಂತೆ ಗಡ್ಡ!!!

ಗಡ್ಡ ಎನ್ನುವುದು ಹಲವು ಯುವಕರ ಸೌಂದರ್ಯದ ರಹಸ್ಯ. ಗಡ್ಡ ಇಷ್ಟ ಪಡುವ ಹೆಣ್ಣು ಮಕ್ಕಳು ಬಹಳ. ಆದರೆ ಕೆಲವರಿಗೆ ಗಡ್ಡ ಚೆಂದ ಕಾಣುವುದಿಲ್ಲ. ಕೆಲವು ಹೆಣ್ಣುಮಕ್ಕಳಿಗೆ ಗಡ್ಡ ಹೊಂದಿದ ಪುರುಷರು ಇಷ್ಟವಾಗುವುದೂ ಇಲ್ಲ. ಎಷ್ಟೊ ಕಚೇರಿಗಳಲ್ಲಿ ಕ್ಲೀನ್ ಶೇವ್ ಇಷ್ಟಪಡುತ್ತಾರೆ.ವಕೀಲರಿಗೆ ನ್ಯಾಯಾಲಯದಲ್ಲಿ ಗಡ್ಡಬಿಟ್ಟರೆ ಕೆಂಗಣ್ಣುಮಾಡಿ ನೋಡುತ್ತಾರೆ.  ಆದರೆ ಈ ದೇಶದಲ್ಲಿ ಇಲ್ಲಿಯ ಆಫೀಸಿನಲ್ಲಿ ಗಡ್ಡಬಿಟ್ಟರೆ ಮಾತ್ರ ಎಂಟ್ರಿ ಗಡ್ಡ ಇಲ್ಲದ ಪುರುಷರಿಗೆ ನೊ ಎಂಟ್ರಿ!

ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಜನರಿಗೆ ಹಲವಾರು ರೀತಿಯ ನಿಯಮಗಳನ್ನು ಜಾರಿಗೆ ತರುವ ಮೂಲಕ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಇದೀಗ ಗಡ್ಡ ತೆಗೆದವರಿಗೆ ಉದ್ಯೋಗ ನೀಡಲಾಗುವುದಿಲ್ಲ ಎಂದು ಹೊಸ ಪ್ರಕಟಣೆಯನ್ನು ಹೊರಡಿಸಿದೆ.


Ad Widget

Ad Widget

Ad Widget

ತಾಲಿಬಾನ್ ಸರ್ಕಾರ, ಎಲ್ಲಾ ಸರ್ಕಾರಿ ಉದ್ಯೋಗಿಗಳಿಗೆ ಗಡ್ಡವನ್ನು ಹೊಂದಿರಲು ಮತ್ತು ಡ್ರೆಸ್ ಕೋಡ್‌ಗೆ ಬದ್ಧವಾಗಿರಲು ನಿರ್ದೇಶಿಸಿದೆ. ಇದನ್ನು ಪಾಲಿಸದಿದ್ದಲ್ಲಿ ವಜಾ ಮಾಡಲಾಗುವುದು ಎಂದು ತಿಳಿಸಿದೆ.

ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿತವು ಅಲ್ಲಿನ ಸರ್ಕಾರಿ ಕಚೇರಿಗಳ ನೌಕರರಿಗೆ ಹೊಸ ನಿಯಮವನ್ನು ಹೇರಿದೆ. ಸರ್ಕಾರಿ ನೌಕರರು ಗಡ್ಡ ಬಿಟ್ಟಿರಬೇಕು ಮತ್ತು ಸ್ಥಳೀಯ ಉಡುಪನ್ನೇ ಧರಿಸಿರಬೇಕು ಎಂದು ಸಾರ್ವಜನಿಕ ನೈತಿಕತೆ ಸಚಿವಾಲಯ ಆದೇಶ ಹೊರಡಿಸಿದೆ.

ತಾಲಿಬಾನ್‌ ಆಡಳಿತ ಆರಂಭವಾದಾಗಿನಿಂದ ಬಹುತೇಕ ಎಲ್ಲ ಹೆಣ್ಣು ಮಕ್ಕಳೂ ಕೆಲಸ ಬಿಡುವಂತೆ ಮಾಡಲಾಗಿದೆ. ಗಡ್ಡ ಬಿಡುವವರೆಗೂ ಹಾಗೂ ಜುಬ್ಟಾ, ಕೋಟ್‌ ಮತ್ತು ಟೋಪಿ ಧರಿಸುವವರೆಗೂ ನೌಕರರು ಕಚೇರಿಗೆ ಬಾರದಿರಲು ಸೂಚಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: