ಒಂದು ವೈನ್ ಬಾಟಲ್ ನಿಂದಾಗಿ ರೂ.50,000 ಕಳೆದುಕೊಂಡ ಯುವತಿ | ಆನ್ಲೈನ್ ಮೋಸಕ್ಕೆ ಯುವತಿ ಕಂಗಾಲು !

Share the Article

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡಾ ಇದ್ದಾರೆ ಎಂಬ ಮಾತು ಸುಳ್ಳಲ್ಲ. ಈಗ ಎಲ್ಲವೂ ಆನ್ಲೈನ್ ಮಯವಾಗಿರುವುದರಿಂದ ಜನ ಇದನ್ನೇ ನಂಬುತ್ತಾರೆ. ಹಾಗೂ ಇದರಿಂದನೇ ಮೋಸ ಹೋಗುತ್ತಾರೆ. ಎಷ್ಟೇ ಮೆಸೇಜ್, ಎಷ್ಟೇ ತಿಳುವಳಿಕೆಯ ಮಾಹಿತಿಯನ್ನು ಪೊಲೀಸ್ ನವರು ನೀಡಿದ್ದರೂ, ಹೇಗಾದರೂ ಎಲ್ಲಾದರೂ ಜನ ಮೋಸ ಹೋಗುತ್ತಾರೆ. ಈಗ ಅಂತದ್ದೇ ಒಂದು ಘಟನೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದಿದೆ.

ಆನ್‌ಲೈನ್‌ನಲ್ಲಿ ‘ವೈನ್’ ಕಾಯ್ದಿರಿಸಿದ್ದ ಯುವತಿಯೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು 50 ಸಾವಿರ ಮೊತ್ತ ಡ್ರಾ ಮಾಡಿಕೊಂಡ ಘಟನೆ ನಡೆದಿದೆ.

ಲಾಲ್‌ಬಾಗ್ ರಸ್ತೆಯ ವಸತಿ ಸಮುಚ್ಚಯವೊಂದರಲ್ಲಿ ನೆಲೆಸಿರುವ 22 ವರ್ಷದ ಯುವತಿ ಈ ಸಂಬಂಧ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ಯುವತಿಯು ವೆಬ್‌ಸೈಟ್‌ ಮೂಲಕ ವೈನ್ ಕಾಯ್ದಿರಿಸಿದ್ದು ರೂ.540 ಹಣವನ್ನು ಕೂಡಾ ಪಾವತಿಸಿದ್ದರು. ಅವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕೆಲ ನಿಮಿಷಗಳಲ್ಲಿ ನಿಮ್ಮ ಮನೆಗೆ ‘ವೈನ್’ ತಲುಪಿಸಲಿದ್ದೇನೆ. ಅದಕ್ಕೂ ಮುನ್ನ ರೂ.10 ಶುಲ್ಕ ಪಾವತಿಸುವಂತೆ ಸೂಚಿಸಿದ್ದ. ನಿಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿ ಹೇಳುವಂತೆ ತಿಳಿಸಿದ್ದ. ಆತನ ಮಾತು ನಂಬಿ ಒಟಿಪಿ ಹೇಳಿದ್ದರು. ಕೂಡಲೇ ಅವರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಎಗರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Leave A Reply