ಹೋಟೆಲ್ ತಿಂಡಿ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ | ನಾಳೆಯಿಂದ ಬೀಳಲಿದೆ ಕಿಸೆಗೆ ಕತ್ತರಿ !!!
ಮನೆಊಟ ಪ್ರಿಯರಿಗಿಂತ ಹೋಟೆಲ್ ಊಟ ಇಷ್ಟ ಪಡುವವರೇ ಹೆಚ್ಚು. ಹೋಟೆಲ್ ಊಟಕ್ಕೆ ಒಗ್ಗಿಕೊಂಡ ನಾಲಿಗೆಮೇಲೆ ಈಗ ದರ ಬಿಸಿ ಬೀಳಲಿದೆ.ಹೋಟೇಲ್ ಪ್ರಿಯರ ಕಿಸೆಗೆ ಕತ್ತರಿ ಬೀಳಲಿದೆ. ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.
ಅಡುಗೆ ಎಣ್ಣೆ, ಡೀಸೆಲ್, ಗ್ಯಾಸ್ ದರ ಹೆಚ್ಚಳ ಕಾರಣ ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ. ಗ್ರಾಹಕರು ಸಂಖ್ಯೆ ಕಡಿಮೆಯಾಗುವ ಆತಂಕದಿಂದ ತಿಂಡಿ-ತಿನಿಸು ದರ ಏರಿಕೆ ಮಾಡಿರಲಿಲ್ಲ. ಸದ್ಯ ಅಡುಗೆ ಎಣ್ಣೆ (ಲೀಟರ್ಗೆ .200), ಅಡುಗೆ ಅನಿಲ (.50 ಹೆಚ್ಚಳ) ಬೆಲೆ ಹೆಚ್ಚಾಗಿದೆ. ಹಾಗಾಗಿ ದರ ಹೆಚ್ಚಿಸುವ ಅನಿವಾರ್ಯತೆ ಉಂಟಾಗಿದೆ ಎಂದು ಹೋಟೇಲ್ ಮಾಲಿಕರು ಹೇಳಿದ್ದಾರೆ.
ಏಪ್ರಿಲ್ 1 ರಿಂದ ಹೋಟೆಲ್ ಗಳಲ್ಲಿ ಊಟ, ತಿಂಡಿ ದರ ಶೇಕಡ ಹತ್ತರಷ್ಟು ಹೆಚ್ಚಳವಾಗಲಿದೆ. ವಡೆ 25 ರೂಪಾಯಿ, ಪೂರಿ 50 ರೂಪಾಯಿಗೆ ಏರಿಕೆಯಾಗಲಿದೆ. ಕರಿದ ಪದಾರ್ಥ ದ ಬೆಲೆ ಏರಿಕೆಯಾಗಿದೆ. ಉಳಿದಂತೆ ತಿಂಡಿ, ಊಟದ ಬೆಲೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿದೆ. ದರ ಏರಿಕೆ ಬಳಿಕ ನಾಲ್ಕು ದಿನದ ವ್ಯಾಪಾರ, ವಹಿವಾಟು ನೋಡಿಕೊಂಡು ಪುನಃ ಏ.4ರಂದು ಸಂಘದ ಸದಸ್ಯರ ಜತೆಗೆ ಸಭೆ ನಡೆಸಿ ಚರ್ಚಿಸಲಿದ್ದೇವೆ ಎಂದು ಹೋಟೆಲ್ ಮಾಲಿಕರು ತಿಳಿಸಿದ್ದಾರೆ.