ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಚುಂಬಿಸಿದ ಅನಾಮಿಕ ವ್ಯಕ್ತಿ !! | ಬರೋಬ್ಬರಿ ಏಳು ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಹಿಳಾ ರೈಲು ಪ್ರಯಾಣಿಕರೊಬ್ಬರ ಕೆನ್ನೆಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 7 ವರ್ಷಗಳ ಬಳಿಕ ನ್ಯಾಯಾಲಯ 1 ವರ್ಷದ ಜೈಲು ಶಿಕ್ಷೆ ಮತ್ತು 1೦ ಸಾವಿರ ರೂಪಾಯಿ ದಂಡ ವಿಧಿಸಿದೆ.

ಗೋವಾದ ಪಣಜಿ ನಿವಾಸಿ ಕಿರಣ್ ಸುಜಾ ಎಂಬಾತ ಶಿಕ್ಷೆಗೊಳಾಗಾದ ವ್ಯಕ್ತಿ. ಈತ ಮುಂಬೈನ ಸಿಎಸ್ ಎಂಟಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯ ಕೆನ್ನೆಗೆ ಮುತ್ತಿಟ್ಟಿದ್ದರು. ಮಹಿಳೆ ಈತನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು.


Ad Widget

Ad Widget

Ad Widget

ಮುಂಬೈನ ಸಿಎಸ್‌ಎಂಟಿ ಪೊಲೀಸರ ಪ್ರಕಾರ, ಆಗಸ್ಟ್ 23, 2015ರಂದು ಮಹಿಳಾ ಪ್ರಯಾಣಿಕರೊಬ್ಬರು ತನ್ನ ಸ್ನೇಹಿತರೊಂದಿಗೆ ಗೋವಂಡಿಯಿಂದ ಹಾರ್ಬರ್ ರಸ್ತೆಯಲ್ಲಿರುವ ಸಿಎಸ್ಎಂಟಿ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ರೈಲು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ ಪ್ಲಾಟ್‌ಫಾರ್ಮ್‌ ನಂಬರ್ 1 ಕ್ಕೆ ಆಗಮಿಸಿದಾಗ ಕಿರಣ್ ಸುಜಾ ಮಹಿಳೆಯ ಬಲ ಕೆನ್ನೆಗೆ ಮುತ್ತಿಟ್ಟಿದ್ದಾನೆ. ನಂತರ ಸಂತ್ರಸ್ತೆ ಸಿಎಸ್‌ಎಂಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಸಂತ್ರಸ್ತೆಯ ದೂರನ್ನು ದಾಖಲಿಸಿಕೊಂಡ ನಂತರ ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 354, 354 (ಎ) (1) ಅಡಿ ಪ್ರಕರಣ ದಾಖಲಿಸಿದ್ದರು. ಅಂದಿನ ಸಹಾಯಕ ಪೊಲೀಸ್ ನಿರೀಕ್ಷಕ ಗಣಪತ್ ಗೊಂಡೈ ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದರು. ವಿಚಾರಣೆ ವೇಳೆ ಆರೋಪಿಯ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಪಿ ಕೇದಾರ್ ಇದೀಗ ತೀರ್ಪು ನೀಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: