ಕೆರೆಯ ಕಲುಷಿತ ನೀರಿನಿಂದಾಗಿ ಬಾತುಕೋಳಿ ಹಾಗೂ ಮೀನುಗಳ ಮಾರಣಹೋಮ | ವಿಷದ ಮೇವು ಸೇವಿಸಿ 60 ಕುರಿಗಳು ಸಾವು -ಸುಮಾರು 15 ಲಕ್ಷ ನಷ್ಟ !!
ಮೈಸೂರು:ಅದೆಷ್ಟೋ ಪ್ರಾಣಿಗಳು ಮಾನವ ಮಾಡುವ ಕೆಟ್ಟ ಕೆಲಸಕ್ಕೆ ಬಲಿಯಾಗುತ್ತಲೇ ಇದೆ.ಕೆರೆ ನೀರುಗಳಿಗೆ, ಗಿಡಗಳಿಗೆ ರಾಸಾಯನಿಕ ಸಿಂಪಡಿಸಿಸುವುದು ಇವೇ ಮೂಕ ಪ್ರಾಣಿಗಳ ನಾಶಕ್ಕೆ ಕಾರಣವಾಗಿದೆ. ಇದೇ ರೀತಿ ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ದುರಂತ ಸಂಭವಿಸಿದೆ.
ಕಲುಷಿತ ನೀರಿನಿಂದಾಗಿ ಕರೆಯಲ್ಲಿದ್ದ ಬಾತುಕೋಳಿಗಳು ಹಾಗೂ ಮೀನುಗಳು ಸಾವನ್ನಪ್ಪಿರುವ ದಾರುಣ ಘಟನೆ ಆಲನಹಳ್ಳಿ ಸಮೀಪದ ಹೊರವಲಯದಲ್ಲಿರುವ ತಿಪ್ಪಯ್ಯನ ಕೆರೆಯಲ್ಲಿ ನಡೆದಿದೆ.
ದುರಂತಕ್ಕೆ ಕೆರೆಯಲ್ಲಿನ ನೀರು ಕಲುಷಿತಗೊಂಡಿರುವುದೇ ಮುಖ್ಯ ಕಾರಣ ಎನ್ನಲಾಗುತ್ತಿದ್ದು,ಕೆರೆಗೆ ಯುಜಿಡಿ ನೀರು ಹರಿಯುತ್ತಿರುವುದರಿಂದ ಇಂತಹ ಅನಾಹುತಕ್ಕೆಕಾರಣವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಈ ಕೆರೆಯನ್ನು ಮೈಸೂರಿನ ಮೃಗಾಲಯ ನಿರ್ವಹಣೆ ಮಾಡುತ್ತಿದ್ದು,ಘಟನಾ ಸ್ಥಳಕ್ಕೆ ಮೃಗಾಲಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೊಂದೆಡೆ ವಿಷದ ಹುಲ್ಲು ಸೇವಿಸಿ 60ಕುರಿಗಳು ಸಾವನ್ನಪ್ಪಿರುವ ಘಟನೆ ಮೈಸೂರಿನ ಕೆಆರ್ ನಗರ ತಾಲೂಕಿನ ಬಸವಾಪಟ್ಟಣದಲ್ಲಿ ನಡೆದಿದೆ.
ರೈತ ಸಿದ್ದೇಗೌಡ, ಹೆಳವೇಗೌಡ ಎಂಬುವವರಿಗೆ ಸೇರಿದ ಕುರಿಗಳಾಗಿವೆ. ಇವರು ಮೂಲತಃ ಮೈಸೂರಿನವರಲ್ಲ ಮಂಡ್ಯ ಜಿಲ್ಲೆಯವರಾಗಿದ್ದು,ಸುಮಾರು 200 ಕುರಿಗಳನ್ನು ಮಂಡ್ಯದಿಂದ ಮೇವನ್ನು ಹರಿಸಿ ಮೈಸೂರಿಗೆ ಕರೆ ತಂದಿದ್ದರು. ಈ ವೇಳೆ ವಿಷದ ಹುಲ್ಲು ಸೇವನೆ ಮಾಡಿ ಸುಮಾರು 60 ಕುರಿಗಳು ಸಾವನ್ನಪ್ಪಿದ್ದು, ಕುರಿಗಳ ಸಾವಿನಿಂದ ಸುಮಾರು 15 ಲಕ್ಷ ನಷ್ಟವಾಗಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾವನ್ನಪ್ಪಿರುವ ಕುರಿಗಳನ್ನು ಕಂಡು ರೈತರು ಮರುಕ ವ್ಯಕ್ತಪಡಿಸಿದ್ದು,ಈ ಕುರಿತು ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.