ಫ್ರಿಡ್ಜ್ ನ ಅಗತ್ಯವಿಲ್ಲದೆ ನೀರನ್ನು ಸದಾ ತಂಪಾಗಿರುಸುತ್ತೆ ಈ ಬಾಟಲ್ | ರೋಗ ನಿರೋಧಕ, ಪ್ರಯಾಣದ ಸಮಯದಲ್ಲೂ ಕೊಂಡೊಯ್ಯಬಹುದಾದ ಈ ಬಾಟಲ್ ನ ಮಾಹಿತಿ ಇಲ್ಲಿದೆ
ಬೇಸಗೆಯ ಧಗೆಗೆ ದಣಿವು ನೀಗಿಸಲು ಹೆಚ್ಚಿನ ಜನ ತಂಪಾಗಿನ ನೀರು, ಪಾನೀಯ ಕುಡಿಯುತ್ತಾರೆ.ಮನೆಯಲ್ಲಿರುವಾಗ ಫ್ರಿಡ್ಜ್ ನೀರು ಕುಡಿಯುತ್ತಾರೆ.ಆದ್ರೆ ಹೊರಗಡೆ ಪ್ರಯಾಣ ಬೆಳೆಸೋವಾಗ ತಣ್ಣನೆಯ ನೀರು ಸಿಗೋದು ತುಸು ಕಷ್ಟವೇ ಸರಿ. ಇಂತಹ ಜನರಿಗಾಗಿಯೇ ಬಂದಿದೆ ಕೋಲ್ಡ್ ವಾಟರ್ ಬಾಟೆಲ್.
ಹೌದು. ಫ್ರಿಡ್ಜ್ ಇಲ್ಲದೆಯೇ ನೀರನ್ನು ತಂಪಾಗಿರಿಸಬಹುದು.ಇದುವೇ BOLDFIT ಸ್ಟೇನ್‌ಲೆಸ್ ಸ್ಟೀಲ್ ವಾಟರ್ ಬಾಟಲ್.ಈ ಬಾಟಲಿಯನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗಿದೆ.ಈ ಒಂದು ಲೀಟರ್ ಬಾಟಲಿಯನ್ನು ಫ್ಲಿಪ್ಕಾರ್ಟ್ನಲ್ಲಿ 1,050 ರೂ.ಗೆ ಖರೀದಿಸಬಹುದಾಗಿದ್ದು,ಇದರ ವಿಭಿನ್ನ ರೀತಿಯ ಬಾಟಲ್ ಗಳ ಮಾಹಿತಿ ಇಲ್ಲಿದೆ ನೋಡಿ.
ಮಿಲ್ಟನ್ ಥರ್ಮೋಸ್ಟೀಲ್ ಟಿಯಾರಾ 900:
ಈ ವಾಟಲ್ ಬಾಟಲಿಯನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗಿದೆ. ಇದರ ಲುಕ್ ಕೂಡ ತುಂಬಾ ಸ್ಟೈಲಿಶ್ ಆಗಿದೆ. ಇದರಲ್ಲಿ, ನೀರಿನ ಜೊತೆಗೆ,ಪಾನೀಯಗಳನ್ನು ದೀರ್ಘಕಾಲದವರೆಗೆ ಶೀತ ಅಥವಾ ಬಿಸಿಯಾಗಿ ಇರಿಸಬಹುದು. ಈ ಒಂದು ಲೀಟರ್ ಬಾಟಲಿಯನ್ನು ಫ್ಲಿಪ್‌ಕಾರ್ಟ್‌ನಿಂದ 1,050 ರೂ.ಗೆ ಖರೀದಿಸಬಹುದು.
ಸೆಲ್ಲೋ ಸ್ವಿಫ್ಟ್ ಸ್ಟೇನ್‌ಲೆಸ್ ಸ್ಟೀಲ್ ಡಬಲ್ ವಾಲ್ಡ್ ಫ್ಲಾಸ್ಕ್:
ಸೆಲ್ಲೋ ಸ್ವಿಫ್ಟ್ ಸ್ಟೇನ್‌ಲೆಸ್ ಸ್ಟೀಲ್ ಡಬಲ್ ವಾಲ್ಡ್ ಫ್ಲಾಸ್ಕ್‌ನಲ್ಲಿ ನೀವು 1000ml ನೀರನ್ನು ಸಂಗ್ರಹಿಸಬಹುದು. ಇದು ಡಬಲ್ ವಾಲ್ ಫ್ಲಾಸ್ಕ್ ಅನ್ನು ಹೊಂದಿದ್ದು, ಹೆಚ್ಚಿನ ಶಾಖದಲ್ಲಿಯೂ ನೀರನ್ನು ದೀರ್ಘಕಾಲದವರೆಗೆ ತಂಪಾಗಿಡಲು ಸಹಾಯ ಮಾಡುತ್ತದೆ. ಇದನ್ನು 899 ರೂ.ಗೆ ಖರೀದಿಸಬಹುದು.
iGRiD ಸ್ಟೇನ್‌ಲೆಸ್ ಸ್ಟೀಲ್ ಕೋಲ್ಡ್ ವ್ಯಾಕ್ಯೂಮ್ ಡ್ರಿಂಕಿಂಗ್ ಬಾಟಲ್:
ಈ 500ML ಬಾಟಲಿಯನ್ನು ರೂ 859 ಕ್ಕೆ ಖರೀದಿಸಬಹುದು. ಈ ನೀರಿನ ಬಾಟಲಿಯನ್ನು ಪ್ರಯಾಣಿಸುವಾಗಲೂ ಒಯ್ಯಲು ಉತ್ತಮವೆಂದು ಪರಿಗಣಿಸಲಾಗಿದ್ದು,ಇದು ಲೀಕ್‌ಪ್ರೂಫ್ ವ್ಯಾಕ್ಯೂಮ್ ಕ್ಯಾಪ್‌ನೊಂದಿಗೆ ಬರುತ್ತದೆ. ಈ ನೀರಿನ ಬಾಟಲಿಯು ಸ್ಮಡ್ಜ್ ನಿರೋಧಕವಾಗಿದೆ.
iGRiD ಸ್ಟೇನ್‌ಲೆಸ್ ಸ್ಟೀಲ್ ಡಬಲ್ ವಾಲ್ ಇನ್ಸುಲೇಟೆಡ್ ವಾಟರ್ ಬಾಟಲ್:
ಇದು 1000ml ಸಾಮರ್ಥ್ಯದೊಂದಿಗೆ ಬರುತ್ತದೆ. ಈ ಒಂದು ಲೀಟರ್ ಬಾಟಲಿಯನ್ನು ಕೇವಲ 969 ರೂ.ಗೆ ಖರೀದಿಸಬಹುದು. ಇದರಲ್ಲಿ ನೀವು ಸುಲಭವಾಗಿ ನೀರನ್ನು ತುಂಬಿಸುವುದರ ಜೊತೆಗೆ ಸ್ವಚ್ಛಗೊಳಿಸಬಹುದು. ಇದರಿಂದ ದಿನವಿಡೀ ನೀರನ್ನು ತಂಪಾಗಿಡಬಹುದು.