ಪುಷ್ಪಾ ಸಿನಿಮಾದ ಶ್ರೀವಲ್ಲಿ ಹಾಡಿಗೆ ಥಕ -ಥೈ ಸ್ಟೆಪ್ ಹಾಕಿ ಅಲ್ಲು ಅರ್ಜುನ್-ರಶ್ಮಿಕಾ ನನ್ನೇ ಇಂಪ್ರೆಸ್ ಮಾಡಲು ಹೊರಟ ಗೊರಿಲ್ಲಾ !!‌ | ಎಲ್ಲರ ಮುಖದಲ್ಲೂ ನಗು ತರಿಸುವ ತಮಾಷೆಯ ವೀಡಿಯೋ ವೈರಲ್

ಅಲ್ಲು ಅರ್ಜುನ್ ಹಾಗೂ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಸೃಷ್ಟಿಸಿದ್ದ ಕ್ರೇಝ್ ಅಂತಿಂಥದ್ದಲ್ಲ. ಈ ಚಿತ್ರದ ಹಾಡುಗಳು, ಡೈಲಾಗ್‌ಗಳು ಜನಮನ ಗೆದ್ದಿದ್ದವು. ಸಾಕಷ್ಟು ಮಂದಿ ಪುಷ್ಪ ಚಿತ್ರದ ಹಾಡಿಗೆ ಮತ್ತು ಡೈಲಾಗ್‌ಗೆ ಲಿಪ್‌ ಸಿಂಕ್ ಮಾಡಿ ಖುಷಿಪಟ್ಟಿದ್ದರು. ಈ ಎಲ್ಲಾ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲೂ ಸಖತ್ ವೈರಲ್ ಆಗಿದ್ದವು. ಸದ್ಯ ಇದೇ ಚಿತ್ರದ ಹಾಡಿನ ತಮಾಷೆಯ ಕ್ಲಿಪ್ ಒಂದು ಫುಲ್ ವೈರಲ್ ಆಗುತ್ತಿದೆ.

ಮನಸ್ಸಿಗೆ ಆನಂದ ನೀಡುವ ವೀಡಿಯೋ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಗೊರಿಲ್ಲಾವೊಂದು `ಪುಷ್ಪ’ ಚಿತ್ರದ ಹಾಡಿಗೆ ಹೆಜ್ಜೆ ಹಾಕುವ ದೃಶ್ಯ. ಈ ದೃಶ್ಯ ಎಲ್ಲರ ಮುಖದಲ್ಲೂ ನಗುವರಳಿಸದೇ ಇರದು.


Ad Widget

Ad Widget

Ad Widget

dinesh_adhi ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯ ಇದು. ಮೃಗಾಲಯದ ತನ್ನ ಆವರಣದಲ್ಲಿ ಗೊರಿಲ್ಲಾವೊಂದು ಇರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ತನ್ನ ಆವರಣದಲ್ಲಿ ಇರುವ ಗೊರಿಲ್ಲಾ ಬರುತ್ತಿರುವ ದೃಶ್ಯಕ್ಕೆ ಹಿನ್ನೆಲೆಯಲ್ಲಿ ಶ್ರೀವಲ್ಲಿ ಹಾಡನ್ನೂ ಜೋಡಿಸಲಾಗಿದೆ. ಅಂತೆಯೇ, ಒಂದು ಹಂತದಲ್ಲಿ ಈ ಗೊರಿಲ್ಲಾ ಥೇಟ್ ಸಿನಿಮಾದ ಹಾಡಿನಲ್ಲಿ ಇರುವ ಸ್ಟೆಪ್ಸ್‌ನಂತೆಯೇ ಹೆಜ್ಜೆ ಇಟ್ಟಿದ್ದು, ಈ ದೃಶ್ಯ ಎಲ್ಲರಲ್ಲೂ ನಗುವುಕ್ಕಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲು ಅರ್ಜುನ್ ಅವರು ಹಾಡಿನಲ್ಲಿ ಹಾಕಿದ್ದ ಸ್ಟೆಪ್ಸ್‌ ಅನ್ನೇ ನೆನಪಿಸುವಂತೆ ಈ ಗೊರಿಲ್ಲಾ ಕೂಡಾ ಸಾಗಿದೆ! ಗೊರಿಲ್ಲಾದ ಹೆಜ್ಜೆಗೆ ಅದ್ಭುತವಾಗಿ ಹೊಂದುವಂತೆಯೇ ಶ್ರೀವಲ್ಲಿ ಹಾಡನ್ನು ಇಲ್ಲಿ ಜೋಡಿಸಲಾಗಿದೆ.

ನಿರೀಕ್ಷೆಯಂತೆಯೇ ಈ ವೀಡಿಯೋ ನೆಟ್ಟಿಗರಲ್ಲಿ ಮಂದಹಾಸ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ಬಲು ಆಸಕ್ತಿಯಿಂದಲೇ ಈ ದೃಶ್ಯವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ, ಈ ವೀಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ.

Leave a Reply

error: Content is protected !!
Scroll to Top
%d bloggers like this: