ಭಾರತೀಯ ಸೇನೆ ಮೇಲೆ ಬಾಂಬ್ ಎಸೆದು ಎಸ್ಕೇಪ್ ಆದ ಬುರ್ಖಾಧಾರಿ ಮಹಿಳೆ !! | ಬ್ಯಾಗ್ ನಿಂದ ಬಾಂಬ್ ತೆಗೆದು ಎಸೆಯೋ ವೀಡಿಯೋ ಎಲ್ಲೆಡೆ ವೈರಲ್

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಶಿಬಿರದ ಮೇಲೆ ನಿನ್ನೆ ಸಂಜೆ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಬಾಂಬ್ ಎಸೆಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಈ ಬುರ್ಖಾಧಾರಿ ಮಹಿಳೆ ಬಾಂಬ್ ಎಸೆಯುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

 

ಲಭ್ಯವಾಗಿರುವ ಸಿಸಿಕ್ಯಾಮೆರಾ ದೃಶ್ಯಾವಳಿಗಳಲ್ಲಿ ಮಹಿಳೆಯು ರಸ್ತೆಯ ಮಧ್ಯದಲ್ಲಿ ನಿಂತು ತನ್ನ ಬ್ಯಾಗ್‌ನಿಂದ ಬಾಂಬ್ ತೆಗೆದು ಸಿಆರ್‌ಪಿಎಫ್ ಶಿಬಿರದ ಮೇಲೆ ಎಸೆದಿದ್ದಾಳೆ. ನಂತರ, ಸ್ಥಳದಿಂದ ಓಡಿಹೋಗುತ್ತಾಳೆ. ಭದ್ರತಾ ಶಿಬಿರದ ಹೊರಗೆ ಬಾಂಬ್ ಬಿದ್ದ ಕಾರಣ ಯಾವುದೇ ನಷ್ಟ ಅಥವಾ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯ ನಂತರ ಪ್ರದೇಶವನ್ನು ತಕ್ಷಣವೇ ಸುತ್ತುವರಿಯಲಾಯಿತು. ಮಹಿಳೆಯನ್ನು ಗುರುತಿಸಲಾಗಿದೆ ಮತ್ತು ಆಕೆಯ ಪತ್ತೆಗೆ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆಕೆಯನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.‌

Leave A Reply

Your email address will not be published.