24k ಚಿನ್ನದ ಕಾಫಿ ಬಗ್ಗೆ ಕೇಳಿದ್ದೀರಾ?? | ಫಸ್ಟ್ ಕ್ಲಾಸ್ ಟೇಸ್ಟ್ ಇರುವ ಈ ಕಾಫಿಯನ್ನು ಈ ನಟಿ ಚಪ್ಪರಿಸಿದ್ದಾರಂತೆ !!|ಚಿನ್ನದ ಪದರಗಳಿಂದಾದ ಈ ಗೋಲ್ಡ್ ಕಾಫಿ ಬಗ್ಗೆ ಆಕೆ ಹೀಗೆ ಹೇಳುತ್ತಾಳೆ

‘ಕಾಫಿ’ಅಂದ್ರೇನೆ ಏನೋ ಒಂದು ಮಜಾ.ಇದೊಂತರ ಫ್ರೆಂಡ್ ಇದ್ದಾಗೆ. ಬೇಜಾರ್ ಆದಾಗ, ಖುಷಿ ಅನಿಸಿದಾಗ, ಬೋರ್ ಹೊಡೆದಾಗ ಹೆಚ್ಚಿನವರು ಟೈಮ್ ಸ್ಪೆಂಡ್ ಮಾಡೋದೇ ಇದರ ಜೊತೆ. ಯಾಕಂದ್ರೆ ಇದೊಂದು ತರ ಮೂಡ್ ರಿಫ್ರೆಶರ್.ಕಾಫಿ ಕುಡಿಯಲು ಹೊತ್ತು ಗೊತ್ತು ಬೇಕಾಗಿಲ್ಲ, ಬೇಕು ಅಂದ್ರೆ ರಪ್ಪನೇ ಮಾಡಿ ಕುಡಿಬೋದು ಅಲ್ವಾ!?

ಸಾಮಾನ್ಯವಾಗಿ ನಾವೆಲ್ಲರೂ ಕಾಫಿ ಡಿಕಾಕ್ಷನ್ ಗೆ ಒಂದಿಷ್ಟು ಹಾಲು, ಸಕ್ಕರೆ ಬೆರೆಸಿಕೊಂಡು ಕುಡಿಯುವುದು ಪದ್ಧತಿ.ಕಾಫಿ ಡೇಗಳಿಗೆ ಹೋಗುವಾಗ ಕೆಪುಚಿನೋ , ಬ್ಲಾಕ್ ಕಾಫಿ, ಕೋಲ್ಡ್ ಕಾಫಿ ಹೀಗೆ ವಿಭಿನ್ನ ರೀತಿಯ ಕಾಫಿಗಳನ್ನು ಟೇಸ್ಟ್ ಮಾಡುತ್ತೇವೆ.ಆದ್ರೆ ಇಲ್ಲಿ ಇರೋದು ಅಂತಿಂಥಾ ಕಾಫಿಯಲ್ಲ, 24K ಗೋಲ್ಡ್‌ ಚಿನ್ನದ ಕಾಫಿ.

https://www.instagram.com/p/CbUS272ANCi/?utm_medium=copy_link

ಹೌದು.ಹಿಂದಿಯ ಮಾಜಿ ನಟಿ ಹಾಗೂ ಬಿಗ್‌ ಬಾಸ್‌ 3ನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದಾಗ ಸನಾ ಖಾನ್‌ ಈ ಕಾಫಿ ಕುಡಿದಿದ್ದು,24K ಗೋಲ್ಡ್‌ ಚಿನ್ನದ ಕಾಫಿ ಸವಿಯುವ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಇದು ನಿಜವಾದ 24 ಕ್ಯಾರೆಟ್ ಚಿನ್ನದ ಪದರಗಳೊಂದಿಗೆ ಅಗ್ರಸ್ಥಾನದಲ್ಲಿದ್ದು,ಈ ಆಕರ್ಷಕ ಕಾಫಿ ದುಬೈನ ಅಟ್ಮಾಸ್ಫಿಯರ್ ಲೌಂಜ್‌ನಲ್ಲಿ ಲಭ್ಯವಿದೆ.ಚಿನ್ನದ ಕಾಫಿಯ ವಿಶೇಷತೆಯೆಂದರೆ ನಿಜವಾದ ಚಿನ್ನದ ಪದರಗಳ ಸೇರ್ಪಡೆಯಾಗಿದೆ. ಅಷ್ಟೇ ಅಲ್ಲ ಈ ಕಾಫಿಯ ಬೆಲೆ ಅಷ್ಟಿಷ್ಟಲ್ಲ. ಈ ಕ್ಲಾಸಿಕ್ ಕಾಫಿಯ ಬೆಲೆ 160 ದಿರ್ಹಮ್ ಅಂದರೆ ಅಂದಾಜು ರೂ. 3190.

ಸನಾ ಖಾನ್‌ ಇಸ್ಲಾಂ ಪಂಡಿತ ಅನಾಸ್‌ರನ್ನು ಮದುವೆಯಾಗಿದ್ದು,ಪತಿ ಜೊತೆಗೆ ದುಬೈನಲ್ಲಿ ಸಮಯ ಕಳೆಯುವ ಫೋಟೋವನ್ನು ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದು, ಈ ಬಾರಿ ವಿಶೇಷವಾದ ಗೋಲ್ಡ್ ಕಾಫಿ ಫೋಟೋ ಹಂಚಿಕೊಂಡು ‘ಬುರ್ಜ್ ಖಲೀಫಾದಲ್ಲಿ ಬೆಳಗಿನ ಜಾವದ ತಿಂಡಿ ತಿನ್ನಲು ಗಂಡ ಸರ್ಪ್ರೈಸ್ ನೀಡಿದಾಗ, ಚಿನ್ನದ ಲೇಪವಿರುವ ಕಾಫಿ ಕಪ್ ನಲ್ಲಿ ಕಾಫಿ ಕುಡಿಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಬುರ್ಜ್ ಖಲೀಫಾದ ವೈಭೋಗಯುತ ಕೊಠಡಿಯಲ್ಲಿ ಕುಳಿತು ಸನಾ ಹಾಗೂ ಅನಾಸ್ ಕಾಫಿ ಕುಡಿದಿದ್ದಾರೆ.ಕನ್ನಡದಲ್ಲಿ ‘ಗೋಲ್ಡನ್‌ ಸ್ಟಾರ್‌’ ಗಣೇಶ್‌ ಅಭಿನಯದ ‘ಕೂಲ್‌’ ಸಿನಿಮಾದಲ್ಲಿ ಸನಾ ಖಾನ್‌ ನಟಿಸಿದ್ದು, ಮದುವೆ ಬಳಿಕ ಧರ್ಮದ ಕಾರಣಕ್ಕಾಗಿ ಸನಾ ಖಾನ್ ಅವರು ನಟನೆಗೆ ಗುಡ್‌ಬೈ ಹೇಳಿದ್ದಾರೆ.

Leave A Reply

Your email address will not be published.