ತನ್ನ ಮೈ ಮುಟ್ಟಿದ್ದಕ್ಕೆ ವಕೀಲನಿಗೆ ಚೇರ್ ಹಾಗೂ ಕಲ್ಲಿನಿಂದ ಹೊಡೆಯಲು ಮುಂದಾದ ವಕೀಲೆ !! | ಕೋರ್ಟ್ ಆವರಣದಲ್ಲಿ ಲಾಯರ್ ಗಳಿಬ್ಬರ ಬಿಗ್ ಹೈಡ್ರಾಮಾ

ಕೋರ್ಟ್ ಮುಂಭಾಗದಲ್ಲಿ ಪ್ರಕರಣದ ಕುರಿತು ಚರ್ಚೆ ನಡೆಸಬೇಕಾದ ವಕೀಲರಿಬ್ಬರು ಕೋರ್ಟ್ ಆವರಣದಲ್ಲೇ ಹೈಡ್ರಾಮಾ ಮಾಡಿರುವ ಘಟನೆ ಕೆಜಿಎಫ್ ನ್ಯಾಯಾಲಯದ ಮುಂಭಾಗ ನಡೆದಿದೆ.

 

ತನ್ನ ಮೈ ಮುಟ್ಟಿದ್ದಕ್ಕೆ ವಕೀಲೆಯೊಬ್ಬರು ವಕೀಲನಿಗೆ ಚೇರ್ ಹಾಗೂ ಕಲ್ಲಿನಿಂದ ಹೊಡೆಯಲು ಯತ್ನಿಸಿದ್ದಾರೆ. ವಕೀಲೆ ವೆನಿಲ್ಲಾ, ವಕೀಲ ಬಾಬುವಿಗೆ ಚೇರ್ ಎತ್ತೆಸೆದು ಹಲ್ಲೆಗೆ ಯತ್ನ ಮಾಡಿದ್ದಾರೆ.

ಸ್ಥಳದಲ್ಲಿ ಇಬ್ಬರು ವಕೀಲರ ಹೈಡ್ರಾಮಾ ಕಂಡು ಜನರು ಕೆಲ ಕಾಲ ಚಕಿತಗೊಂಡಿದ್ದಾರೆ. ಇಬ್ಬರ ಗಲಾಟೆಯನ್ನು ಕಂಡ ಇತರ ವಕೀಲರು ಹಾಗೂ ಸ್ಥಳೀಯರು ಆಕೆಯನ್ನು ಪ್ರಶ್ನೆ ಮಾಡಿದಾಗ ವಕೀಲ ನನ್ನ ಮೈ ಮುಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ರಾಬರ್ಟ್ಸನ್ ಪೇಟೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

Leave A Reply

Your email address will not be published.