9 ನೇ ಕ್ಲಾಸ್ ಹುಡುಗಿಯ ಕೊಲೆ ಪ್ರಕರಣಕ್ಕೆ ರೋಚಕ ತಿರುವು| ಸರಿಸುಮಾರು ಒಂದು ತಿಂಗಳ ಬಳಿಕ ಪ್ರಿಯಕರನ ಶವ ಕೂಡಾ ಪತ್ತೆ!

0 15

ಸರಿಸುಮಾರು ಒಂದು ತಿಂಗಳ ಹಿಂದೆ ಮಸ್ಕಿ ಪಟ್ಟಣ ಹೊರವಲಯದಲ್ಲಿ ನಡೆದಿದ್ದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ.

ಯಾವ ಜಾಗದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತೋ, ಅದೇ ಸ್ಥಳದ ಸಮೀಪದ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಸಿಕ್ಕಿದೆ.

ಫೆ.25ರಂದು ಶಾಲೆಗೆಂದು ಹೋಗಿದ್ದ 9ನೇ ತರಗತಿ ವಿದ್ಯಾರ್ಥಿನಿ ಭೂಮಿಕಾಳನ್ನು ಮಸ್ಕಿ ಪಟ್ಟಣ ಹೊರವಲಯದ ಸಾನಬಾಳ ರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು. ಇದೀಗ ಸಮೀಪದ ಪೊದೆಯಲ್ಲಿ ರಮೇಶ್ ಎಂಬಾತನ ಶವ ಪತ್ತೆಯಾಗಿದೆ.

ರಮೇಶ್‌ ಮತ್ತು ಭೂಮಿಕಾ ಸಂಬಂಧಿಕರು. ಭೂಮಿಕಾ ರಮೇಶ್ ಗೆ ಸೋದರತ್ತೆ ಮಗಳು. ಹಾಗಾಗಿ ರಮೇಶ್ ಭೂಮಿಕಾಳನ್ನು ಪ್ರೀತಿ ಮಾಡುತ್ತಿದ್ದ. ಹಾಗಾಗಿ ಮನೆ ಮಂದಿಯಲ್ಲಿ ಮದುವೆ ಮಾಡಿಕೊಳ್ಳುವಂತೆ ಕೇಳುತ್ತಿದ್ದ.
ಭೂಮಿಕಾ ಮೊದಲು ಮದುವೆಗೆ ಒಪ್ಪಿ, ನಂತರ ನಿರಾಕರಿಸಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ನೊಂದ ರಮೇಶ್, ಆಕೆಯನ್ನು ಶಾಲೆಯಿಂದ ಕರೆತರುವ ನೆಪದಲ್ಲಿ ಬಂದ ಮಾರ್ಗಮಧ್ಯೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಭೂಮಿಕಾಳ ಕೊಲೆಯನ್ನು ಪೆ.25ರಂದು ಮಾಡಲಾಗಿತ್ತು. ರಸ್ತೆಯಲ್ಲೇ ಶಾಲಾ ಬ್ಯಾಗ್ ಕೂಡ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿತ್ತು. ಈ ಕೊಲೆ ಆರೋಪಿ ರಮೇಶ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ಆದರೆ, ಮಂಗಳವಾರ ( ನಿನ್ನೆ) ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ರಮೇಶನ ಶವ ಪತ್ತೆಯಾಗಿದೆ. ಪ್ರಿಯತಮೆ ಕೊಲೆಯಾದ ಸ್ಥಳದಿಂದ ಸ್ವ ದೂರದಲ್ಲೇ ಆರೋಪಿ ಶವ ದೊರೆತಿದೆ. ಪೊದೆಯಲ್ಲಿದ್ದ ಮೃತದೇಹವನ್ನ ನಾಯಿಗಳು ಹೊರಗೆ ಎಳೆದು ತಂದಿದೆ.

ಸ್ಥಳಕ್ಕೆ ಬಂದ ಮಸ್ಕಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಭೂಮಿಕಾಳನ್ನ ಕೊಂದ ಎರಡೂರು ದಿನಗಳ ಬಳಿಕ ಅದೇ ಜಾಗದಲ್ಲಿ ರಮೇಶ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿಡುವ ಶಂಕೆ ವ್ಯಕ್ತವಾಗಿದೆ. ಭೂಮಿಕಾ ಕೊಲೆಯಾದ ಜಾಗದಲ್ಲಿ ವಿಷದ ಬಾಟಲಿಯೂ ಪತ್ತೆಯಾಗಿದೆ.

Leave A Reply