94ಸಿ ಅಡಿಯಲ್ಲಿ ಅನಧಿಕೃತ ಮನೆಯನ್ನು ಸಕ್ರಮಗೊಳಿಸಲು ಮಾ.31ರವರೆಗೆ ಅವಕಾಶ
ಮಂಗಳೂರು : ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಮೀನುಗಳಲ್ಲಿ 2015ರ ಜ.1ಕ್ಕಿಂತ ಮೊದಲು ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಅವಕಾಶ ಮಾ.31ರಂದು ಕೊನೆಗೊಳ್ಳಲಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಅರ್ಜಿಗಳನ್ನ ಸ್ವೀಕರಿಸಲು 2019ರ ಮಾ.31ರವರೆಗೆ ಕಾಲಾವಕಾಶ ನಿಗದಿಪಡಿಲಾಗಿತ್ತು. ಬಳಿಕ 2022ರ ಮಾ.31ರ ಕಾಲಾವಕಾಶ ನೀಡಲಾಗಿತ್ತು.
ಅರ್ಜಿಗಳನ್ನು ಸ್ವೀಕರಿಸಿ, ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಫಲಾನುಭವಿಗಳಿಗೆ 2023ರ ಮಾ.31ರ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ ಎಂದು ಹೇಳಲಾಗಿದೆ.