ವಯಸ್ಸಿನ ಅಂತರ ಇದ್ದರೂ ಮದುವೆಯಾದ ಜೋಡಿ | ಮದುವೆಯಾದ 5 ತಿಂಗಳಲ್ಲಿ ದುರಂತ |

ಈ ಮದುವೆಗೆ ವಯಸ್ಸು ಅಡ್ಡ ಬಂದಿಲ್ಲ. ಏಕೆಂದರೆ ಇಬ್ಬರೂ ಇಷ್ಟಪಪಟ್ಟು ಮದುವೆಯಾಗಿದ್ದರು. ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವನ ಜೊತೆ ಮದುವೆಯಾಗಿದ್ದ ಯುವತಿ ಖುಷಿಯಾಗಿಯೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಳು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡಾ ಆಗಿತ್ತು. ಈ ಜೋಡಿ ಟಿಕ್ ಟಾಕ್ ಮಾಡಿಕೊಂಡು ಸಂತೋಷವಾಗಿಯೇ ಇತ್ತು.

ಇವರ ಒಲವಿನ ಬದುಕಿಗೆ ಪ್ರೀತಿಯೇ ಆಸರೆಯಾಗಿತ್ತು. 2021ರ ಅಕ್ಟೋಬರ್‌ನಲ್ಲಿ ಸಂತೆಮಾವತ್ತೂರು ಗ್ರಾಮದ ಮೇಘನಾ ಮತ್ತು ಅಕ್ಕಿಮರಿಪಾಳ್ಯದ ಶಂಕರಣ್ಣ ಅವರ ಮದುವೆ ನಡೆದಿತ್ತು.


Ad Widget

Ad Widget

Ad Widget

ಆದರೀಗ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಈ ಜೋಡಿಯ ಬಾಳಲ್ಲಿ ದುರಂತ ಸಂಭವಿಸಿದೆ. ಯುವತಿ ಜತೆ ಸಪ್ತಪದಿ ತುಳಿದಿದ್ದ ರೈತ ಶಂಕರಪ್ಪ ಇಂದು (ಮಂಗಳವಾರ) ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಡೆತ್‌ನೋಟ್ ಕೂಡ ಪತ್ತೆಯಾಗಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಣ್ಣ (45) ಮೃತರು. ಗ್ರಾಮದ ಹೊಲವೊಂದರಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ಶವದ ಬಳಿ ಪತ್ನಿ ಮೇಘನಾಳ ಗೋಳಾಟ ನೋಡಲಾಗ್ತಿಲ್ಲ. ಶಂಕರಪ್ಪನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಅಂದ ಹಾಗೇ ಮೇಘನಾಳಿಗೆ ಇದು ಎರಡನೇ ಮದುವೆ. ಈಕೆಯ ಮೊದಲ ಪತಿ ಈಕೆಯನ್ನು ಬಿಟ್ಟು ಓಡಿಹೋಗಿದ್ದ. ಆತನಿಗಾಗಿ ಕಾದು ಕುಳಿತಿದ್ದ ಮೇಘನಾ ಕೊನೆಗೆ ತನಗಿಂತಲೂ 20 ವರ್ಷ ಹಿರಿಯವನ ಜೊತೆ ಮದುವೆಯಾಗಿದ್ದಳು. ಶಂಕರಪ್ಪ ಕೂಡಾ ಮದುವೆಯಾಗದೇ ಒಂಟಿ ಜೀವನ ನಡೆಸುತ್ತಿದ್ದ. ಆತನ ಬಾಳಿಗೆ ಈಕೆ ಹೊಂಬೆಳಕಾಗಿ ಬಂದಿದ್ದಳು. ಆದರೆ ಈಗ ಏನಾಯಿತೋ ಗೊತ್ತಿಲ್ಲ, ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: