ಮಗುವನ್ನು ತೋಳಲ್ಲಿ ಹಿಡಿದುಕೊಂಡೇ, ಮಗುವಿಗಾಗಿ ಗಾಬರಿಯಿಂದ ಮನೆ ತುಂಬಾ ಹುಡುಕಾಡಿದ ಮಹಾ ತಾಯಿ ! ಇದು ಮೊಬೈಲ್ ಪುರಾಣದ ಕಥೆ
ಮರೆವು ಮನುಷ್ಯನಲ್ಲಿ ಇರೋ ಸಹಜ ಗುಣ. ಎಷ್ಟೋ ಮಂದಿ ತಲೆ ಮೇಲೆನೇ ಕನ್ನಡಕ್ಕ ಇಟ್ಕೊಂಡು ಕೋಣೆ ತುಂಬಾ ಹುಡುಕಾಡುವುದು, ಕೀ ಕಿಸೆಯಲ್ಲಿ ಇದ್ದರೂ, ಎಲ್ಲಾ ಕಡೆ ಹುಡುಕಾಡುವುದು ಅನಂತರ ದೊರೆತ ಬಳಿಕ ತಲೆ ಚಚ್ಚಿಕೊಂಡು ನಗಾಡುವುದು ನಮ್ಮ ಮರೆವಿನ ಲಕ್ಷಣವನ್ನು ತೋರಿಸುತ್ತದೆ.
ಅಂಥದ್ದೇ ಒಂದು ಮರೆವಿನ ವೀಡಿಯೋ ನಿಮಗಾಗಿ ನಾವು ಇಲ್ಲಿ ತಂದಿದ್ದೇವೆ. ಈ ತಾಯಿಯ ಮರೆವು ಕಂಡು ಒಂದು ಕಡೆ ನಗು ಬಂದರೂ ಇನ್ನೊಂದು ಕಡೆ ಮರೆವಿನ ತೀವ್ರತೆ ನಿಜವಾದರೆ ಏನು ಅನ್ನೋ ಭಯ ಕಾಡುವುದು ಖಂಡಿತ.
ಇದು ತಾಯಿಯೊಬ್ಬಳ ಮರೆವಿನ ದೃಶ್ಯ. ಈಕೆ ಮರೆತದ್ದು ಪರ್ಸ್, ಕೀ, ಬ್ಯಾಗು, ಕನ್ನಡಕ್ಕ ಯಾವುದೂ ಅಲ್ಲ. ಈ ಎಲ್ಲಾ ವಸ್ತುಗಳಿಂದ ಮಿಗಿಲಾದ ಆಕೆಯ ಸ್ವಂತ ಮಗುವನ್ನ!
ತೋಳಿನಲ್ಲಿ ಮಗುವನ್ನು ಹಿಡಿದುಕೊಂಡಿದ್ದರೂ ಈಕೆ ಮಗುವನ್ನು ಹುಡುಕುತ್ತಾ ಕೋಣೆ ಇಡೀ ಓಡಾಡಿದ್ದಾಳೆ. ಇಷ್ಟಕ್ಕೂ ಈಕೆಯ ಮರೆವಿಗೆ ಕಾರಣ ಮೊಬೈಲ್ ಫೋನ್…! ಮೊಬೈಲ್ ಫೋನ್‌ನಲ್ಲಿ ಬ್ಯುಸಿ ಇದ್ದಾಗ ಒಂದೊಂದು ಸಲ ಸುತ್ತಲೂ ಏನಾಗುತ್ತಿದೆ ಎಂಬುದೂ ಅರಿವಾಗುವುದಿಲ್ಲ. ಅಷ್ಟರಮಟ್ಟಿಗೆ ಕೆಲವರು ಮೊಬೈಲ್ ಫೋನ್‌ನಲ್ಲಿ ತಲ್ಲೀನರಾಗಿರುತ್ತಾರೆ. ಇದು ಕೂಡಾ ಅಂತಹದ್ದೇ ಮೊಬೈಲ್ ಫೋನ್‌ನ ಕಾರಣದಿಂದಾದ ಉಂಟಾದ ತಮಾಷೆಯ ದೃಶ್ಯ.
ಮೊಬೈಲ್ ಫೋನ್‌ನಲ್ಲೇ ಮುಳುಗಿದ್ದ ಈಕೆ ತನ್ನ ಕಂದ ವಾಕರ್‌ನಲ್ಲೇ ಇದೆ ಎಂಬ ಯೋಚನೆಯಲ್ಲಿದ್ದಾಳೆ. ಆದರೆ, ತಕ್ಷಣ ವಾಕರ್ ನೋಡಿದಾಗ ಕಂದ ಕಾಣುತ್ತಿಲ್ಲ. ಹೀಗಾಗಿ, ದಿಗಿಲುಗೊಂಡ ಈಕೆ ತೋಳಿನಲ್ಲಿ ಮಗುವನ್ನು ಹಿಡಿದುಕೊಂಡಿದ್ದರೂ ಮಗುವಿಗಾಗಿ ಕೋಣೆ ತುಂಬಾ ಹುಡುಕಿದರು. ಅಷ್ಟರಲ್ಲಿ ಮಹಿಳೆಗೆ ಕಂದ ತನ್ನ ತೋಳಲ್ಲೆ ಇರುವುದು ನೆನಪಾಗುತ್ತಿದ್ದಂತೆಯೇ ಈ ಮಹಿಳೆ ನಗುತ್ತಾ ಪುಟಾಣಿಯನ್ನು ಮುದ್ದಿಸುವುದನು ದೃಶ್ಯ ಇಲ್ಲಿ ನೋಡಬಹುದು.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ.