ಫ್ಲಿಪ್‌ಕಾರ್ಟ್‌ ಗ್ರಾಹಕರಿಗೊಂದು ಸಿಹಿಸುದ್ದಿ !! | 24 ಸಾವಿರ ಬೆಲೆಯ Samsung galaxy F42 5G ಸ್ಮಾರ್ಟ್‌ಫೋನ್ ಅನ್ನು ಕೇವಲ 3 ಸಾವಿರಕ್ಕೆ ಖರೀದಿಸಿ

ಫ್ಲಿಪ್‌ಕಾರ್ಟ್‌ ಗ್ರಾಹಕರಿಗೊಂದು ಸಿಹಿ ಸುದ್ದಿ ಇದೆ. ಮಾರ್ಚ್ 27 ರಿಂದ ಮಾರ್ಚ್ 31 ರವರೆಗೆ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್ ಸೇಲ್‌ ನಡೆಯುತ್ತಿದೆ. ಗ್ರಾಹಕರು ಈ ಆಫರ್ ನಲ್ಲಿ ಅತಿ ಕಡಿಮೆ ಬೆಲೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡುಕೊಳ್ಳಬಹುದು.

ಈ ಆಫರ್ ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್, ಲ್ಯಾಪ್‌ಟಾಪ್ ಮತ್ತು ಇಯರ್‌ಫೋನ್‌ಗಳನ್ನು ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ಸೇಲ್‌ನಲ್ಲಿ ನೀವು ಸ್ಯಾಮ್ ಸಂಗ್ ಗ್ಯಾಲಕ್ಸಿ F42 5G ಅನ್ನು 24 ಸಾವಿರ ರೂಪಾಯಿಗಳ ಬದಲಿಗೆ ಕೇವಲ 3 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು.


Ad Widget

Ad Widget

Ad Widget

ಸ್ಯಾಮ್ ಸಂಗ್ ಗ್ಯಾಲಕ್ಸಿ F42 5G ಅನ್ನು ರೂ. 23,999 ರೂ. ಗೆ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು 29% ರಷ್ಟು ದೊಡ್ಡ ರಿಯಾಯಿತಿಯಲ್ಲಿ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನಿಂದ 16,999 ರೂಪಾಯಿಗಳಿಗೆ ಖರೀದಿಸಬಹುದು. CITI ಬ್ಯಾಂಕ್‌ನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ಒಂದು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಅದು ಅದರ ಬೆಲೆಯನ್ನು 15,999 ರೂ.ಗಳಿಗೆ ಇಳಿಸುತ್ತದೆ.

ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ F42 5G ಅನ್ನು ಸಹ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನ ಈ ಎಕ್ಸ್‌ಚೇಂಜ್ ಆಫರ್‌ನಲ್ಲಿ 13 ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದು. ಇದರ ಸಂಪೂರ್ಣ ಪ್ರಯೋಜನವನ್ನು ಪಡೆದರೆ, ರೂ. 2,999 ರೂ. ಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ F42 5G ಅನ್ನು ಖರೀದಿಸಬಹುದು.

5G ಸೇವೆಗಳನ್ನು ಹೊಂದಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ F42 5G ಸ್ಮಾರ್ಟ್‌ಫೋನ್, 6GB RAM ಮತ್ತು 128GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಶನ್ 700 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 6.6-ಇಂಚಿನ ಪೂರ್ಣ HD + ಡಿಸ್ಪ್ಲೇ ಮತ್ತು 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದರಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗುತ್ತಿದ್ದು, ಇದರ ಮುಖ್ಯ ಸಂವೇದಕ 64MP, ಎರಡನೇ ಸಂವೇದಕ 5MP ಮತ್ತು ಮೂರನೇ ಸಂವೇದಕ 2MP ಆಗಿದೆ.

Leave a Reply

error: Content is protected !!
Scroll to Top
%d bloggers like this: