ಪಕ್ಕದ್ಮನೆ ವ್ಯಕ್ತಿ ತನ್ನ ತಾಯಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡದ್ದನ್ನು ಪ್ರಶ್ನಿಸಿದ ಮಗ | ಆ ಒಂದು ಪ್ರಶ್ನೆಯೇ ಆತನ ಜೀವವನ್ನೇ ಕಸಿದುಕೊಂಡಿತು !!

ಪಕ್ಕದ ಮನೆಯ ವ್ಯಕ್ತಿಯೊಬ್ಬ ತನ್ನ ಅಮ್ಮನ ಹೆಸರನ್ನು ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದನ್ನು ಪ್ರಶ್ನಿಸಿದ ಆಕೆಯ ಮಗ ಪ್ರಾಣ ಕಳೆದುಕೊಂಡ ದುರಂತ ಘಟನೆ ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದೆ.

 

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಹೊಸದುರ್ಗ ಗ್ರಾಮದ ಹೊನ್ನುರಸ್ವಾಮಿ (35) ಪ್ರಶ್ನೆ ಮಾಡಿ ಪ್ರಾಣ ಕಳೆದುಕೊಂಡ ಯುವಕ. ಕುಲಾಯಪ್ಪ ಎಂಬಾತ ಹಚ್ಚೆ ಹಾಕಿಸಿಕೊಂಡಿದ್ದ ವ್ಯಕ್ತಿ.

ಹೊನ್ನುರಸ್ವಾಮಿಯ ತಾಯಿಯ ಜೊತೆ ಕುಲಾಯಪ್ಪ ಅಕ್ರಮ ಸಂಬಂಧ ಹೊಂದಿದ್ದು, ಈ ವಿಷಯವಾಗಿ ಹೊನ್ನುರಸ್ವಾಮಿ ಮತ್ತು ಕುಲಾಯಪ್ಪ ಮಧ್ಯೆ ಹಲವು ಬಾರಿ ಜಗಳವಾಗಿದ್ದು, ರಾಜಿ ಪಂಚಾಯ್ತಿ ಮಾಡಿಸಲಾಗಿತ್ತು.

ಆದರೆ ತನ್ನ ತಾಯಿಯ ಹೆಸರನ್ನು ಕುಲಾಯಪ್ಪ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದನ್ನು ನೋಡಿದ್ದ ಹೊನ್ನುರಸ್ವಾಮಿ ಪ್ರಶ್ನೆ ಮಾಡಿದ್ದ. ಈ ಸಂಬಂಧ ಮಾತಿಗೆ ಮಾತು ಬೆಳೆದು ಗಲಾಟೆಯಾಗಿ, ಕುಲಾಯಪ್ಪ ಮತ್ತು ಸಂಗಡಿಗರು ಹೊನ್ನುರಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹೊನ್ನುರಸ್ವಾಮಿಯನ್ನು ವೈಎನ್‌ಹೊಸಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೊನ್ನುರಸ್ವಾಮಿ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ವೈಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.