ದೇಶದ ಮೊದಲ ಅತ್ಯಾಧುನಿಕ ‘ಸ್ಟೀಲ್ ರೋಡ್’ | ಮಳೆಯಿಂದ ಹಾನಿಯಾಗುವುದಿಲ್ಲ, ಹೆಚ್ಚು ಕಾಲ ಬಾಳಿಕೆ ಬರುವ ಈ ರೋಡ್ ಇರುವುದೆಲ್ಲಿ ?

Share the Article

ಮಣ್ಣಿನ ರೋಡ್ ನೋಡಿದ್ದೀವಿ, ಟಾರ್, ಕೊನೆಗೇ ಕಾಂಕ್ರೀಟ್ ರೋಡ್ ಕೂಡಾ ನೋಡಿದ್ದೀವಿ. ಆದರೆ ಇವೆಲ್ಲಾ ಕಾಲ ಸರಿದ ಹಾಗೇ ಅಲ್ಲಲ್ಲಿ ಗುಂಡಿ ಬೀಳುವುದು ಅಥವಾ ಅದರ ಬಾಳಿಕೆ ಕಮ್ಮಿ ಆಗುವುದು ಇದೆಲ್ಲಾ ಸಾಮಾನ್ಯ ಜನರಿಗೂ ಗೊತ್ತಿರೋ ವಿಷಯ. ಆದರೆ ಇಲ್ಲೊಂದು ಅತ್ಯಾಧುನಿಕ ರೋಡ್ ಒಂದು ಸೃಷ್ಟಿ ಮಾಡಿದ್ದಾರೆ. ಇದರ ಬಗ್ಗೆ ತಿಳಿದರೆ ನೀವು ಆಶ್ಚರ್ಯಚಕಿತರಾಗುವುದರಲ್ಲಿ ಎರಡು ಮಾತಿಲ್ಲ. ಯಾವ ರೀತಿಯ ರೋಡ್ ಎನ್ನುವುದನ್ನು ತಿಳಿಯೋಣ ಬನ್ನಿ.

ಇಲ್ಲಿ ಸ್ಟೀಲ್ ತ್ಯಾಜ್ಯ ಬಳಸಿ ಅತ್ಯಾಧುನಿಕ ರೋಡ್ ನಿರ್ಮಾಣ ಮಾಡಲಾಗಿದೆ.

ಗುಜರಾತ್‌ನ ಸೂರತ್‌ನಲ್ಲಿ 1 ಕಿ.ಮೀ ಉದ್ದದ ಸ್ಟೀಲ್ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆ ಇತರ ರಸ್ತೆಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುವುದಲ್ಲದೇ, ಮಳೆಯಿಂದಲೂ ಹಾನಿಗೊಳಗಾಗುವುದಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಇಂಥ ತ್ಯಾಜ್ಯ ಬಳಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಚಿಂತಿಸಲಾಗಿದೆ.

ದೇಶದಲ್ಲಿ ಪ್ರತಿ ವರ್ಷ 1.9 ಕೋಟಿ ಟನ್ ಸ್ಟೀಲ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇಂಥ ತ್ಯಾಜ್ಯ ಬಳಸಿಕೊಂಡೇ ಗುಜರಾತ್‌ನ ಹಾಜಿರಾ ಕೈಗಾರಿಕಾ ವಲಯದಲ್ಲಿ ಸುಮಾರು 1 ಕಿ.ಮೀ. ಉದ್ದದ 6 ಪಥಗಳ ರಸ್ತೆ ನಿರ್ಮಾಣ ಮಾಡಲಾಗಿದೆ. ಸಿಎಸ್‌ಐಆರ್ ಮತ್ತು ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆಗಳು ರಾಷ್ಟ್ರೀಯ ಉಕ್ಕು ಸಚಿವಾಲಯದ ಮತ್ತು ನೀತಿ ಆಯೋಗದ ಸಹಕಾರದೊಂದಿಗೆ ಈ ರಸ್ತೆ ನಿರ್ಮಾಣ ಮಾಡಿವೆ. ಪ್ರಾಯೋಗಿಕ ಯೋಜನೆ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಟೀಲ್ ರಸ್ತೆಗಳನ್ನು ನಿರ್ಮಾಣದ ಯೋಜನೆ ರೂಪಿಸಲಾಗಿದೆ.

Leave A Reply