ಚಾಲಕನ ಅಜಾಗರೂಕತೆಯಿಂದ ಪ್ರಪಾತಕ್ಕೆ ಉರುಳಿದ ಬಸ್ !! | 7 ಮಂದಿ ಸಾವು, 45 ಜನರಿಗೆ ಗಾಯ

ಇತ್ತೀಚೆಗೆ ದೇಶದಲ್ಲಿ ಖಾಸಗಿ ಬಸ್ಸುಗಳ ಅಪಘಾತಗಳು ಹೆಚ್ಚಾಗಿ ನಡೆಯುತ್ತಿದೆ. ಹಾಗೆಯೇ ಇಲ್ಲಿ ‌ಬಸ್ಸೊಂದು ಪ್ರಪಾತಕ್ಕೆ ಉರಳಿದ ಪರಿಣಾಮ 7 ಮಂದಿ ಸಾವನ್ನಪ್ಪಿ 45 ಮಂದಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಚಾಲಕನ ಅಜಾಗರೂಕತೆಯೇ ಈ ಅವಘಢಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತಿರುಪತಿಯಿಂದ 25 ಕಿ.ಮೀ ದೂರದಲ್ಲಿರುವ ಬಕರಪೇಟ್ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.


Ad Widget

Ad Widget

Ad Widget

ಘಟನೆ ಬಗ್ಗೆ ತಿರುಪತಿಯ ಪೊಲಿಸರೊಬ್ಬರು ಪ್ರತಿಕ್ರಿಯಿಸಿ, ಚಾಲಕನ ಅಜಾಗರೂಕತೆಯಿಂದ ಬಸ್ ಪ್ರಪಾತಕ್ಕೆ ಉರುಳಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: