ಪುತ್ತೂರು :ಕಾರುಗಳ ನಡುವೆ ಡಿಕ್ಕಿ|ಅಪಘಾತದಿಂದ ಕಾರು ಹಾನಿ-ನಾಲ್ವರಿಗೆ ಗಾಯ

Share the Article

ಪುತ್ತೂರು: 120 ಕಾರು ಹಾಗೂ i20 ಕಾರಿನ ನಡುವೆ ಕೆಮ್ಮಾಯಿಯಲ್ಲಿ ಅಪಘಾತ ಸಂಭವಿಸಿದ ಘಟನೆ ಇಂದು ನಡೆದಿದೆ.

ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆ ಹೋಗುತ್ತಿದ್ದ 120 ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು,ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಅಮರನಾಥ್ ಗೌಡ ಅವರ i20 ಕಾರಿನ
ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದಿಂದಾಗಿ ಎರಡು ಕಾರುಗಳು ಹಾನಿಗೊಂಡಿದ್ದು,ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply