ಕೌಟುಂಬಿಕ ಕಲಹದಲ್ಲಿ ಪಾಲಾದ ಪತಿ | ಯಾಕೆ ಗೊತ್ತಾ ?

Share the Article

ಕೌಟುಂಬಿಕ ಕಲಹದಲ್ಲಿ ಏನೇನೆಲ್ಲ ಆಗುತ್ತೆ. ಆಸ್ತಿ ಪಾಸ್ತಿ ಎಲ್ಲಾ ಪಾಲಾಗುತ್ತೆ. ಸ್ಥಿರ ಚರ ಆಸ್ತಿಗಳನ್ನು ಕುಟುಂಬ ಸದಸ್ಯರು ಪರಸ್ಪರ ಹಂಚಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಗಂಡನೇ ಪಾಲಾಗಿದ್ದಾನೆ ಎಂದರೆ ನಂಬುತ್ತೀರಾ ?

ಹೌದು, ವಿಷಯ ಏನಪ್ಪಾ ಅಂದರೆ, ಮಹಿಳೆಯೋರ್ವಳ ಪತಿ ಮೋಸದಿಂದ ಇನ್ನೊಂದು ಮದುವೆ ಆಗಿರುವುದು. ಹಾಗೂ ಈ ಮಹಿಳೆಯರ ಜಗಳದಲ್ಲಿ ಗಂಡ ವಿಭಜನೆ ಆಗುವ ಮಟ್ಟಿಗೆ ಹೋಗಿರುವುದು. ಮೊದಲ ಹೆಂಡತಿಯಿಂದ ಆರು ಮಕ್ಕಳನ್ನು ಹೊಂದಿರುವ ಈ ವ್ಯಕ್ತಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಈಗ ಎರಡನೇ ಪತ್ನಿ ಈಗ ಪತಿ ನನ್ನನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಬಯಸುತ್ತಿಲ್ಲ ಎಂದು ಮಹಿಳೆ ಹೇಳುತ್ತಾಳೆ. ಅದೇ ಸಮಯದಲ್ಲಿ ಮೊದಲ ಹೆಂಡತಿ ಕೂಡ ತನ್ನ ಗಂಡನನ್ನು ಬಿಡಲು ಸಿದ್ಧವಾಗಿಲ್ಲ ಎನ್ನುತ್ತಿದ್ದಾಳೆ.

ಬಿಹಾರದ ಪುರ್ನಿಯಾದಲ್ಲಿ ಈ ವಿಶೇಷ ಪ್ರಕರಣವು ಬೆಳಕಿಗೆ ಬಂದಿದೆ.

ಈ ಕಲಹ ಪೊಲೀಸ್ ಕೌಟುಂಬಿಕ ಸಲಹಾ ಕೇಂದ್ರ ತಲುಪಿದೆ. ಈಗ ಇಬ್ಬರು ಪತ್ನಿಯರ ಮಾತನ್ನು ಆಲಿಸಿದ ಪೊಲೀಸ್ ಕೌಟುಂಬಿಕ ಸಲಹಾ ಕೇಂದ್ರವು ಪತಿ ತನ್ನ ಇಬ್ಬರು ಹೆಂಡತಿಯರನ್ನು ಉಳಿಸಿಕೊಳ್ಳಬೇಕು. ಇಬ್ಬರು ಹೆಂಡತಿಯರನ್ನೂ ಅವನು ನೋಡಿಕೊಳ್ಳಬೇಕು. ಅಲ್ಲದೆ, ಇಬ್ಬರೂ ಪತ್ನಿಯರನ್ನು ಪ್ರತ್ಯೇಕ ಮನೆಗಳಲ್ಲಿ ಇರಿಸಬೇಕೆಂದು ಸೂಚನೆಗಳನ್ನು ನೀಡಿದೆ. ಗಂಡನು ತನ್ನ ಮೊದಲ ಹೆಂಡತಿಯೊಂದಿಗೆ ತಿಂಗಳ ಮೊದಲ 15 ದಿನ ಮತ್ತು ನಂತರದ 15 ದಿನ ಎರಡನೇ ಹೆಂಡತಿಯೊಂದಿಗೆ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಕೌಟುಂಬಿಕ ಸಲಹಾ ಕೇಂದ್ರದ ಈ ನಿರ್ಧಾರಕ್ಕೆ ಪತಿ ಹಾಗೂ ಪತ್ನಿಯರಿಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Leave A Reply