ವಾಹನ ಸವಾರರಿಗೊಂದು ಸಿಹಿ ಸುದ್ದಿ !! | ನಾಲ್ಕು ಚಕ್ರದ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದ ಜೆಕೆ ಕಂಪನಿ

ವಾಹನ ಸವಾರರಿಗೊಂದು ಸಿಹಿ ಸುದ್ದಿ ಇದೆ. ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ ಇತ್ತೀಚೆಗೆ ಭಾರತದಲ್ಲಿ ನಾಲ್ಕು-ಚಕ್ರ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಟೈರ್‌ಗಳನ್ನು ಭಾರತೀಯ ಮಾರುಕಟ್ಟೆಗಾಗಿಯೇ ತಯಾರಿಸಲಾಗಿದ್ದು, ಅವು ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಕಾರುಗಳಿಗೆ ಲಭ್ಯವಿರಲಿವೆ.

ಪಂಕ್ಚರ್ ಗಾರ್ಡ್ ಟೈರ್ ತಂತ್ರಜ್ಞಾನವು ಸ್ವಯಂ-ಗುಣಪಡಿಸುವ ಎಲಾಸ್ಟೊಮರ್ ಒಳಗಿನ ಕೋಟ್‍ನೊಂದಿಗೆ ಬರುತ್ತದೆ. ಇದನ್ನು ಟೈರ್‌ಗಳ ಒಳಗೆ ಇರುವುದರಿಂದ ಇದು ತನ್ನಿಂದ ತಾನಾಗಿಯೇ ಪಂಕ್ಚರ್‌ಗಳನ್ನು ರಿಪೇರಿ ಮಾಡುತ್ತದೆ.


Ad Widget

Ad Widget

Ad Widget

ಮೊಳೆ ಸೇರಿದಂತೆ ಸುಮಾರು 6.0 ಮಿಮೀ ವ್ಯಾಸವನ್ನು ಒಳಗೊಂಡ ಚೂಪಾದ ವಸ್ತುಗಳಿಂದ ಪಂಚರ್ ಆದರೂ ಟೈರ್‌ಗೆ ಏನು ಆಗುವುದಿಲ್ಲ. ಚೂಪಾದ ವಸ್ತುಗಳಿಂದ ಚಕ್ರದ ಹೊರಮೈಯಲ್ಲಿರುವ ಅನೇಕ ಪಂಕ್ಚರ್‌ಗಳನ್ನು ತಕ್ಷಣವೇ ಸ್ವಯಂ ದುರಸ್ತಿ ಆಗುತ್ತದೆ ಎಂದು ಕಂಪನಿ ತಿಳಿಸಿದೆ.

ಸುಧಾರಿತ ಪಂಕ್ಚರ್ ಗಾರ್ಡ್ ಟೈರ್ ಅನ್ನು ಎಲ್ಲಾ ಭಾರತೀಯ ಆನ್-ರೋಡ್ ಮತ್ತು ಆಫ್-ರೋಡ್ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಟೈರ್‌ಗಳು ಸುರಕ್ಷಿತವಾಗಿ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ‘ಜೆಕೆ ಟೈರ್ ಯಾವಾಗಲೂ ನಾವೀನ್ಯತೆ-ನೇತೃತ್ವದ ತಾಂತ್ರಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. 2020ರಲ್ಲಿ ಸ್ಮಾರ್ಟ್ ಟೈರ್ ತಂತ್ರಜ್ಞಾನ ಮತ್ತು ಈಗ ಪಂಕ್ಚರ್ ಗಾರ್ಡ್ ಟೈರ್ ತಂತ್ರಜ್ಞಾನದ ಪರಿಚಯದೊಂದಿಗೆ, ನಮ್ಮ ಗ್ರಾಹಕರಿಗೆ ಸುಧಾರಿತ ಚಲನಶೀಲತೆ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ನಾವು ಮತ್ತೊಮ್ಮೆ ನೀಡಿದ್ದೇವೆ. ಈ ತಂತ್ರಜ್ಞಾನವು ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಸುರಕ್ಷತೆ ಮತ್ತು ಅನುಕೂಲತೆಯನ್ನು ನೀಡುತ್ತದೆ. ಪಂಕ್ಚರ್ ಗಾರ್ಡ್ ಟೈರ್ ತಂತ್ರಜ್ಞಾನವು ಆಟೋ ಎಕ್ಸ್‌ಪೋಸ್ 2020 ರಲ್ಲಿ ಅನಾವರಣಗೊಂಡ ಪರಿಕಲ್ಪನೆಯ ಟೈರ್‌ಗಳ ಭಾಗವಾಗಿದೆ’ ಎಂದು ಹೇಳಿದರು.

Leave a Reply

error: Content is protected !!
Scroll to Top
%d bloggers like this: