ಕುಲಗೋವು ಸಮ್ಮೇಳನದಲ್ಲಿ ಮುಸ್ಲಿಂ ವರ್ತಕರಿಗೆ ನಿಷೇಧ!! ಅಂಗಡಿ ತೆರವುಗೊಳಿಸಿದ ಬಜರಂಗದಳ-ಗಂಟು ಮೂಟೆ ಕಟ್ಟಿ ಹೊರಟ ಮುಸ್ಲಿಂ ವರ್ತಕರು

‘ಕುಲಗೋವು ಸಮ್ಮೇಳನ’ ದಲ್ಲಿ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳನ್ನು ಬಜರಂಗದಳದ ಕಾರ್ಯಕರ್ತರು ತೆರವುಗೊಳಿಸಿದ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ.

 

ತಪೋವನ ಕ್ಷೇತ್ರದ ಮನೇಹಳ್ಳಿ ಮಠದ ಬಿಲ್ವ ಗೋಶಾಲೆಯ ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಇದಾಗಿತ್ತು.

ಮಕ್ಕಳ ಆಟಿಕೆ ವಸ್ತು, ಕಬ್ಬಿನ ಜ್ಯೂಸ್, ತಿಂಡಿ ತಿನಿಸುಗಳ ಮಳಿಗೆಯನ್ನು ಮುಸ್ಲಿಂ ಸಮುದಾಯದ ವರ್ತಕರು ಹಾಕಿದ್ದರು. ‘ಗೋವು ಹತ್ಯೆ ಮಾಡುವರು, ಗೋವು ಸಮ್ಮೇಳನಕ್ಕೆ ಏಕೆ ಬರಬೇಕು. ಅವರಿಗೆ ಅವಕಾಶ ನೀಡುವುದಿಲ್ಲ’ ‘ಹಿಂದೂಗಳು ನಡೆಸುವ ಜಾತ್ರೆಯ ವೇಳೆ ಮುಸ್ಲಿಂ ವರ್ತಕರಿಗೆ ಅವಕಾಶ ನೀಡುವುದಿಲ್ಲ. ಅವರ ಧಾರ್ಮಿಕ ಸ್ಥಳಗಳ ಬಳಿ ವ್ಯಾಪಾರ ಮಾಡಿಕೊಳ್ಳಲಿ ಎಂದು ಅಲ್ಲಿನ ರಸ್ತೆ ಬದಿ ಹಾಗೂ ಮೈದಾನದಲ್ಲಿ ಹಾಕಿದ್ದ ಅಂಗಡಿಗಳನ್ನು ಕಾರ್ಯಕರ್ತರು ತೆರವುಗೊಳಿಸಿದ್ದಾರೆ.

Leave A Reply

Your email address will not be published.