ಕರಾವಳಿಯ ಸಮುದ್ರದಲ್ಲಿ ಮತ್ತೊಮ್ಮೆ ಕಂಡ ‘ನೀಲಿ’ ಅಲೆಗಳು | ಮನೋಹರ ಅದ್ಭುತ ದೃಶ್ಯಕ್ಕೆ ಸಾಕ್ಷಿಯಾದ ಮೀನುಗಾರರು, ಸ್ಥಳೀಯರು |

ಸಮುದ್ರದಲ್ಲಿ ನೀಲಿ ಅಲೆಗಳು ತೀರಕ್ಕೆ ಅಪ್ಪಳಿಸುವ ಮನೋಹರ ದೃಶ್ಯವೊಂದು ಕುಂದಾಪುರ ತಾಲೂಕಿನ ಕೋಡಿ ಸಮುದ್ರದಲ್ಲಿ ಕಂಡಿದೆ.

ಈ ಸುಂದರ ಮನೋಹರ ದೃಶ್ಯ ಕಂಡು ಸ್ಥಳೀಯ ಜನರು, ಮೀನುಗಾರರು ಆಶ್ಚರ್ಯಚಕಿತರಾಗಿದ್ದಾರೆ. ಈ ವಿದ್ಯಾಮಾನ ಎರಡು ವರ್ಷಗಳ ಹಿಂದೆ ನಡೆದಿತ್ತು. ಈಗ ಮತ್ತೆ ಕಾಣ ಸಿಕ್ಕಿದೆ. ಕೋಡಿಯಿಂದ ಬೀಜಾಡಿವರೆಗಿನ ಕಡಲತೀರದಲ್ಲಿ ನೀಲಿ ಅಲೆಗಳು ಕಂಡಿವೆ.

ಕಡಲಿನ ಅಲೆಗಳು ಕರಾವಳಿಯಲ್ಲಿ ವೈವಿಧ್ಯಮಯ ವರ್ಣಕ್ಕೆ ತಿರುಗುತ್ತಿರುವುದು ಕುತೂಹಲ ಮೂಡಿಸಿರುವ ಜತೆಗೆ ಇದರ ವೈಜ್ಞಾನಿಕ ಅಧ್ಯಯನ ನಡೆಸಬೇಕೆಂಬ ಒತ್ತಾಯ ಇದೆ. 2020 ರ ಈಚೆಗೆ ನೀಲಿ, ಹಸಿರು ಮತ್ತು ಬೂದು ವರ್ಣದ ಅಲೆಗಳನ್ನು ಸ್ಥಳೀಯರು ಗುರುತಿಸಿದ್ದಾರೆ.

ಬೂದು ಬಣ್ಣದ ರಸ್ತೆ, ಅಲೆಗಳು ನೀಲಿ ಬಣ್ಣಕ್ಕೆ ತಿರುಗುವುದು ಇವುಗಳು ಕಡಲಿಗೆ ಸೇರುತ್ತಿರುವ ತ್ಯಾಜದ ದುಷ್ಪರಿಣಾಮವೇ ಅಥವಾ ಬೇರೆ ಕಾರಣವಿರಬಹುದೇ ಈ ಕುರಿತು ಅಧ್ಯಯನ ನಡೆಯಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಈ ಮನಮೋಹಕ ದೃಶ್ಯ ಕಣ್ಣಿಗೆ ಮುದ ನೀಡುವುದರ ಜೊತೆಗೆ ಸ್ಥಳೀಯ ಜನರಲ್ಲಿ ಗಾಬರಿಯಂತೂ ಮೂಡಿರುವುದರಲ್ಲಿ ಎರಡು ಮಾತಿಲ್ಲ.

ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಗಣೇಶ್ ಅವರ ಮಾತಿನ ಪ್ರಕಾರ, ‘ ಸೆಲಿನಿಯಂ, ಕ್ಯಾಲ್ಸಿಯಂ, ಕ್ರೋಮಿಯಂ, ಪೊಟ್ಯಾಶಿಯಂ, ಮೆಗ್ನೀಷಿಯಂ, ವೆನಾಡಿಯಂ ಈ ಪೋಷಕಾಂಶಗಳು ಸಮುದ್ರದಲ್ಲಿ ಕರಗಿ ಜೈವಿಕ್ ಪಂಪಿಂಗ್ ನಿಂದಾಗಿ ಈ ರೀತಿಯ ದೃಶ್ಯ ಕಾಣಲು ಸಿಗುತ್ತದೆ. ಸಮುದ್ರದಲ್ಲಿ ಕರಗಿದ ಪೋಷಕಾಂಶಗಳ ಸಾಂದ್ರತೆಯ ಲಕ್ಷಣ ಇದಾಗಿದೆ. ಇದರಿಂದ ಮತ್ಸ್ಯ ಸಂಕುಲಕ್ಕೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ.

Leave A Reply

Your email address will not be published.