ಅವರು ತುಂಬಾ ಮಜಾ ಮಾಡುವುದರಿಂದ ದಪ್ಪ ಆಗಿದ್ದಾರೆ. ತುಂಬಾ ಸೆಕ್ಸ್ ಮಾಡಿದರೆ ದುಂಡಗೆ ಆಗ್ತಾರೆ | ಇದು ಯಾರ ವ್ಯಾಖ್ಯಾನ, ಈ ಪೋಸ್ಟ್ ಓದಿ !

ಬಾಡಿ ಶೇಮಿಂಗ್ ಬಗ್ಗೆ ಅನೇಕ ನಟಿಯರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಅವರಿಗಾದ ಕಹಿ ಘಟನೆಗಳನ್ನು ಮತ್ತು ಕಿರಿಕಿರಿಯ ಸಂಗತಿಗಳನ್ನು ಆಗಿಂದಾಗ್ಗೆ ಹಂಚಿಕೊಂಡಿದ್ದಾರೆ.
ಇಂತಹ ಕೆಟ್ಟ ಅನುಭವ ಕನ್ನಡದ ಅನೇಕ ನಟಿಯರಿಗೂ ಆಗಿದೆ. ಈಗ ಗಾಳಿಪಟ ಖ್ಯಾತಿಯ ನೀತು ಶೆಟ್ಟಿ ಸರದಿ ಅವರು ತಮಗಾದ ನೋವಿನ ಸಂಗತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ದಪ್ಪಗಿರುವ ನಟಿಯರನ್ನು ಈ ಸಮಾಜದ ಕೆಲ ಕ್ರಿಮಿಗಳು ಹೇಗೆಲ್ಲ ಕಾಡುತ್ತವೆ ಎನ್ನುವುದನ್ನು ಸಾಕ್ಷಿ ಸಮೇತ ಅವರು ತೆರೆದಿಟ್ಟಿದ್ದಾರೆ.

ಪ್ರತಿ ಸಲವೂ ಚಾನೆಲ್ ವೊಂದರ ನನ್ನ ವಿಡಿಯೋ ಮರು ಪ್ರಸಾರ ಮಾಡಿದಾಗ ನಿಂದಕರು ಒಟ್ಟಿಗೆ ಕಾಮೆಂಟ್ ಸೆಕ್ಷನ್ ಅಲ್ಲಿ ಸಿಗುತ್ತಾರೆ. ಇವರ ಪ್ರಕಾರ ತೆಳ್ಳಗೆ ಬಳುಕುವ ದೇಹ ಇಲ್ಲದೆ ಇರೋರು ಕೇವಲ ಲೂಸ್ ಫಿಟ್ಟಿಂಗ್ ಬಟ್ಟೆ ಮಾತ್ರ ಹಾಕೋಕ್ಕೆ ಲಾಯಕ್. ದುಂಡಗಿರುವವರು ಯಾಕೆ ದುಂಡಗೆ ಆಗಿದ್ದಾರೆ ಗೊತ್ತಾ? ಅವರು ತುಂಬಾ ಮಜಾ ಮಾಡುವುದರಿಂದ ಹಾಗೆ ಆಗಿದ್ದಾರೆ. ತುಂಬಾ ಸೆಕ್ಸ್ ಮಾಡಿದರೆ ದುಂಡಗೆ ಆಗ್ತಾರೆ.
ಹಾಗಾಗಿ ಅವರಿಗೆ ‘ಸೂ’ ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದು ಸರಿ. ಇವರ ಪ್ರಕಾರ ದೊಡ್ಡ ‘ ಸೈಟ್ ‘ ಇರುವವರ ಮೇಲೆ ಯಾರಿಗೂ ಪ್ರೀತಿ ಹುಟ್ಟಲ್ಲ. ಇನ್ನು ರೋಮಾನ್ಸ್ ದೂರದ ಮಾತು. ಅವರು ಯಾವುದಕ್ಕೂ ನಾಲಾಯಕ್ಕು.
ಹಿಡಿಂಬಿ ಎಂಬ ರಾಕ್ಷಿಸಯಾಗೋಕೆ ಮಾತ್ರ ನಾವು ಲಾಯಕ್. ಪ್ಲಸ್ ಸೈಜ್ ನವರು ಜೀವನ ಪರ್ಯಂತ ದುಃಖದಲ್ಲಿ ಡಯಟ್ ಹಾಗೂ ವರ್ಕೌಟ್ ಬಗ್ಗೆನೇ ಚಿಂತಿಸಿ, ತಗ್ಗಿ ಬಗ್ಗಿ ಸಮಾಜದಿಂದ ವಿಮುಖರಾಗಿ ಬದುಕಬೇಕು. ಬೇರೆ ಯಾವ ವಿಷಯದ ಬಗ್ಗೆಯೂ ನಮಗೆ ಒಪಿನಿಯನ್ ಇರಲೇಬಾರದು. ಇದ್ರೆ, ಮೊದಲು ಸಣ್ಣ ಆಗು, ಆಮೇಲೆ ಮಾತಾಡು’ ಎನ್ನುತ್ತಾರೆ. ‘ಪ್ಲಸ್ ಸೈಜ್’ ಅವ್ರು ಧೈರ್ಯವಾಗಿ ಪಬ್ಲಿಕ್ನಲ್ಲಿ ಅಥವಾ ಟೀವಿಯಲ್ಲಿ ಬಿಂದಾಸ್ ಆಗಿ ಕಾಣಿಸ್ಕೊಂಡ್ರೆ , ಅವರ ‘ಗಟ್ಸ್’ ಬಗ್ಗೆ ಇವರಿಗೆ  ಸಿಟ್ಟು ಬರುತ್ತೆ. ದಪ್ಪ ಇರೋವ್ರು  ಆರೋಗ್ಯವಂತರಲ್ಲ ಅನ್ನೋದೇ ‘ ಫ್ಯಾಕ್ಟ್’  ಅಂತ ಇವರು ನಂಬಿದ್ದಾರೆ. ತೆಳ್ಳಗಿರುವವರೆಲ್ಲ ಫಿಟ್ ಅಂಡ್ ಫೈನ್ ಅಂತ ಅಂದುಕೊಂಡಿರ್ತಾರೆ. ತೆಳ್ಳಗಿಲ್ದೇ ಇರುವವರನ್ನು ಪ್ರಾಣಿಗಳಿಗೆ ಹೋಲಿಸುವುದು ಇವರ  ಹಕ್ಕು ಮಾಡಿಕೊಂಡಿರುತ್ತಾರೆ. ಪ್ಲಸ್ ಸೈಜ್ ಇರೋದ್ರಿಂದ ಅವಕಾಶ ವಂಚಿತರಾಗುವುದು  ಸರಿಯಾಗೇ ಇದೆ ಅಂತ ಇವರಿಗನಿಸುತ್ತೆ. ಇವರು  ಈ ಸಮಾಜದ ‘FatPhobic’ ಜನ. ಇವರ  ಯೋಚನೆಗಳು ತುಂಬಾನೇ ಹಳೆಯ ಕಾಲದ್ದು, ತುಕ್ಕು ಹಿಡಿದದ್ದು ಹಾಗೂ ತುಂಬಾ ವಿಷದಿಂದ ತುಂಬಿದ್ದು. ಇದು ‘ಫ್ಯಾಟ್ ಫೋಬಿಯಾ’ ದ ಜನರ ವಿಶ್ಲೇಷಣೆ.

ಈಗ ಪ್ಲಸ್ ಸೈಜ್ ಜನರು ವಿಶ್ವದಾದ್ಯoತ ಈಗ ಅಡಗಿ ಕೂರ್ತಾ ಇಲ್ಲ. ತೆಗಳಿಕೆ, ಅವಮಾನ, ನೋವಿನಿಂದ ಎದ್ದು ಫೀನಿಕ್ಸ್ ನಂತೇ ಬದುಕ್ತಾ ಇದ್ದಾರೆ.
ಎಂದು ಬರೆದಿದ್ದಾರೆ ನೀತು ಶೆಟ್ಟಿ,. ಅಲ್ಲದೆ “ಹಾಂ…ಈ ಫೋಟೋದಲ್ಲಿ ನನ್ನ ಪ್ರಕಾರ ನಾನು ಮುದ್ದಾಗಿಯೇ ಕಾಣಿಸ್ತಾ ಇದ್ದೀನಿ” ಎಂದು ಫೋಟೋ ಶೇರ್ ಮಾಡಿದ್ದಾರೆ.

Leave A Reply

Your email address will not be published.