ಆಶಾ ಕಾರ್ಯಕರ್ತೆಯರ ಕೈಗೆ ಪುರುಷರ ‘ ಶಿಶ್ನ’ ಕೊಟ್ಟ ಸರ್ಕಾರ | ತೀವ್ರ ಮುಜುಗರಕ್ಕೆ ಈಡಾಗುತ್ತಿರುವ ಆರೋಗ್ಯ ಕಾರ್ಯಕರ್ತರು
ನಮ್ಮಲ್ಲಿ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಮಾತಾಡುವ ವಾತಾವರಣ ತುಂಬಾ ಕಡಿಮೆ. ಆದರೆ ಇದೇ ವಿಷಯವನ್ನು ಮನೆ ಮನೆಗೆ ಹೋಗಿ ವಿವರಿಸಿ ಹೇಳುವಂತಹ ಪರಿಸ್ಥಿತಿಯೊಂದು ಆಶಾ ಕಾರ್ಯಕರ್ತೆಯರಿಗೆ ಬಂದಿದೆ. ಯಾಕೆ ಅಂತೀರಾ ? ಇಲ್ಲಿದೆ ಕೇಳಿ ವಿಷಯ.
ಸಾಮಾನ್ಯವಾಗಿ ಸರಕಾರದಿಂದ ಸಿಗುವ ಆರೋಗ್ಯ ಕಿಟ್ ಬಗ್ಗೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಅದರಲ್ಲಿ ಕೊಡುವ ವಸ್ತುಗಳ ಉಪಯೋಗದ ಬಗ್ಗೆ ವಿವರಣೆ ನೀಡಬೇಕು. ಆದರೆ ಇತ್ತೀಚೆಗೆ ಸರಕಾರದಿಂದ ಒಂದು ಆರೋಗ್ಯ ಕಿಟ್ ಆಶಾ ಕಾರ್ಯಕರ್ತೆಯರಿಗೆ ದೊರಕಿದೆ. ಅದರಲ್ಲಿ ರಬ್ಬರ್ ಆಕಾರದ ಶಿಶ್ನ ಇದ್ದು, ಇದರ ಉಪಯೋಗ ಇತ್ಯಾದಿಗಳ ಬಗ್ಗೆ ವಿವರಣೆ ನೀಡಬೇಕು. ಇದರಿಂದ ಈ ಗ್ರಾಮದ ಆಶಾ ಕಾರ್ಯಕರ್ತೆಯರು ತೀರಾ ಮುಜುಗುರಗೊಳಗಾಗಿದ್ದು ಊರ ಮಂದಿಗೆ ಯಾವ ರೀತಿ ವಿವರಣೆ ನೀಡಬೇಕು ಎಂಬ ಚಿಂತೆಯಲ್ಲಿದ್ದಾರೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದಲ್ಲಿ.
ಮಹಾರಾಷ್ಟ್ರದ ಬುಲ್ಲಾನ ಎಂಬಲ್ಲಿ ಸರಕಾರವು ಕುಟುಂಬ ಯೋಜನೆ ಸಮಾಲೋಚನೆಗಾಗಿ ಆಶಾ ಕಾರ್ಯಕರ್ತೆಯರಿಗೆ ಕಿಟ್ ಒಂದನ್ನು ನೀಡಿದ್ದು, ಇದರಿಂದ ಆಶಾ ಕಾರ್ಯಕರ್ತೆಯರು ಗೊಂದಲ ಹಾಗೂ ಮುಜುಗರಕ್ಕೀಡಾಗುವಂತ ಸಂದರ್ಭ ಬಂದಿದೆ.
ಏಕೆಂದರೆ ಈ ಕಿಟ್ನಲ್ಲಿ ಪುರುಷರ ಮರ್ಮಾಂಗ ಹೋಲುವ ರಬ್ಬರ್ ನೀಡಿರುವುದು.ಇದರಿಂದ ಆಶಾ ಕಾರ್ಯಕರ್ತೆಯರು ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕಿಟ್ನೊಂದಿಗೆ ಕೌನ್ಸೆಲಿಂಗ್ ಮಾಡುವುದು ಹೇಗೆ? ಎಂಬಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಇದ್ದಾರೆ.
ಲೈಂಗಿಕತೆಯ ಬಗ್ಗೆ ಅದರಲ್ಲೂ ಕಾಂಡೋಂ ಬಗ್ಗೆ ಮಾತನಾಡಲೂ ಮುಜುಗುರ ಪಡುವಂತಹ ಗ್ರಾಮೀಣ ಜನರಲ್ಲಿ ಈ ರಬ್ಬರ್ ಶಿಶ್ನದ ಬಗ್ಗೆ ಯಾವ ರೀತಿಯ ಪ್ರಾತ್ಯಕ್ಷಿಕೆ ನೀಡಬೇಕೆಂಬ ಗೊಂದಲ ಹಾಗೂ ನಾಚಿಕೆಯಲ್ಲಿ ಆಶಾ ಕಾರ್ಯಕರ್ತೆರಿದ್ದಾರೆ. ಹಾಗಿದ್ದರೂ ಕೆಲವೊಂದು ಆಶಾ ಕಾರ್ಯಕರ್ತೆ ಇದೂ ನಮ್ಮ ಕೆಲಸದ ಭಾಗ ಎಂದಿದ್ದಾರೆ.
ಮಹಾರಾಷ್ಟ್ರದ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಮುಖ್ಯಸ್ಥೆ ಡಾ.ಅರ್ಚನಾ ಪಾಟೀಲ್ ಮಾತನಾಡಿ, ರಾಜ್ಯಾದ್ಯಂತ ಆರೋಗ್ಯ ಕಾರ್ಯಕರ್ತರು ಮತ್ತು ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ಇಂತಹ ಸುಮಾರು 25 ಸಾವಿರ ಕಿಟ್ಗಳನ್ನು ವಿತರಿಸಲಾಗಿದೆ, ಇದರಲ್ಲಿ ಶಿಶ್ನದ ಮಾದರಿಯ ಲೈಂಗಿಕ ಆಟಿಕೆ ಇದೆ. ವಾಸ್ತವವಾಗಿ, ರಾಜ್ಯದಲ್ಲಿ ಕಾಂಡೋಮ್ಗಳ ಬಳಕೆಯನ್ನು ಉತ್ತೇಜಿಸಲು, ಆರೋಗ್ಯ ಸಚಿವಾಲಯವು ಕುಟುಂಬ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಸಿದ್ಧಪಡಿಸಲಾದ ಕಿಟ್ನಲ್ಲಿ ರಬ್ಬರ್ ಶಿಶ್ನದಂತಹ ರಚನೆಯ ಪ್ರಾತ್ಯಕ್ಷಿಕೆಯನ್ನು ನೀಡುತ್ತಿದೆ ಎಂದಿದ್ದಾರೆ.
ಆದೇಶದ ಪ್ರಕಾರ, ಆಶಾ ಕಾರ್ಯಕರ್ತೆಯರಿಗೆ ಈ ರಬ್ಬರ್ ಶಿಶ್ನ ರಚನೆಯ ಕಾಂಡೋಮ್ನ ಪ್ರಾತ್ಯಕ್ಷಿಕೆಯನ್ನು ವಿವಿಧ ಸ್ಥಳಗಳಲ್ಲಿ ತೋರಿಸಬೇಕು ಇದರಿಂದ ಜನರು ಕಾಂಡೋಮ್ಗಳ ಸರಿಯಾದ ಬಳಕೆಯ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಬಹುದು ಎನ್ನಲಾಗಿದೆ. ಆದರೂ ಇದು ಹಲವು ಕಾರ್ಯಕರ್ತೆಯರಿಗೆ ರಬ್ಬರ್ ಶಿಶ್ನದ ಬಗ್ಗೆ ಪ್ರಾತ್ಯಕ್ಷಿಕೆ ನೀಡುವಾಗ ಮುಜುಗರದ ಸನ್ನಿವೇಶವನ್ನು ಉಂಟು ಮಾಡುವುದರಲ್ಲಿ ಎರಡು ಮಾತಿಲ್ಲ.