ಹಣ್ಣುಗಳ ರಾಜ ಮಾವಿನ ಹಣ್ಣಿಗೆನೇ Z+ ಸೆಕ್ಯುರಿಟಿ !
‘ಹಣ್ಣುಗಳ ರಾಜ’ ಎಂದರೆ ಮಾವಿನಹಣ್ಣು. ಮಾವಿನ ಹಣ್ಣಿನ ರುಚಿ ಸವಿಯದೆ ಹೋದರೆ ಬೇಸಿಗೆ ಕೂಡ ಅಪೂರ್ಣ ಅಲ್ಲವೇ ? ಈಗಾಗಲೇ ಬೇಸಿಗೆಕಾಲ ಆರಂಭಗೊಂಡಿದ್ದು, ಮಾರುಕಟ್ಟೆಗೆ ಮಾವು ಲಗ್ಗೆ ಇಡಲಾರಂಭಿಸಿದೆ.
ಇಲ್ಲೊಂದು ಮಾವಿನ ಹಣ್ಣಿಗೆ ಝೆಡ್ ಪ್ಲಸ್ ಸೆಕ್ಯೂರಿಟಿ ನೀಡಲಾಗುತ್ತದೆ. ಇದು ಸ್ವಲ್ಪ ಜಾಸ್ತಿಯಾಯ್ತು ಅಂತ ನಿಮಗೂ ಅನಿಸಿರಬಹುದು. ಆದರೆ, ಫೋಟೋದಲ್ಲಿ ತೋರಿಸಲಾಗಿರುವ ಮಾವಿನ ಹಣ್ಣಿಗೆ ಯಾವ ರೀತಿ ಸೆಕ್ಯೂರಿಟಿ ಸಿಗುತ್ತಿದೆ ಎಂದರೆ ಅದನ್ನು ಭೇದಿಸಿ ನೀವು ಈ ಮಾವಿನಹಣ್ಣನ್ನು ಕಿತ್ತಲು ಸಾಧ್ಯವಿಲ್ಲ. ಈ ಮಾವನ್ನು ಕಿತ್ತು ತಿನ್ನುವ ವಿಷಯ ಬಿಟ್ಟಾಕಿ, ಅದಕ್ಕೆ ಕಲ್ಲು ಹೊಡೆಯಲು ಕೂಡ ಜನ ಭಯಭೀತರಾಗುತ್ತಿದ್ದಾರೆ
ನಿಜ ವಿಷಯ ಏನೆಂದರೆ ಜೇನುನೊಣಗಳು ಈ ಮಾವಿನ ರಕ್ಷಣೆಯನ್ನು ಮಾಡುತ್ತಿವೆ. ಜೇನುನೊಣಗಳು ಎಷ್ಟೊಂದು ಅಪಾಯಕಾರಿ ಎಂಬ ಸಂಗತಿ ಎಲ್ಲರಿಗೂ ಗೊತ್ತು. ಜೇನುಗೂಡಿನ ಮೇಲೆ ಕಲ್ಲು ಹೊಡೆಯುವುದು ಎಂದರೆ ನಮಗೆ ನಾವೇ ಅಪಾಯ ಎಳೆದುಕೊಂಡಂತೆ. ಅದೇನೇ ಇರಲಿ ವೈರಲ್ ಆಗುತ್ತಿರುವ ಚಿತ್ರದಲ್ಲಿ ಜೇನುನೊಣಗಳು ಮಾವಿನ ಹಣ್ಣನ್ನು ರಕ್ಷಿಸುತ್ತಿವೆ. ಮಾವು ಸಾಮಾನ್ಯ ಜೇನುಗೂಡಿನ ಮೇಲೆ ನೇತಾಡುತ್ತಿದೆ ಎಂಬಂತೆ ಕಂಡುಬರುತ್ತಿದೆ. ಟ್ವಿಟರ್ ನಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ. ಇದರೊಂದಿಗೆ, ‘ಋತುವಿನ ಮೊದಲ ಮಾವು, ಅದೂ Z ಪ್ಲಸ್ ಭದ್ರತೆಯೊಂದಿಗೆ’ ಎಂಬ ಶೀರ್ಷಿಕೆ ಇದೆ ನೀಡಲಾಗಿದೆ.