ಜಾರಿತೆ ಸಿದ್ದರಾಮಯ್ಯ ಅವರ ನಾಲಿಗೆ? ; ಹಿಜಾಬ್ ವಿಷಯಕ್ಕೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

Share the Article

ಇಂದು(ಶುಕ್ರವಾರ) ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಒಂದೇ ಒಂದು ಹೇಳಿಕೆ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.  ಸಿದ್ದು ನಾಲಿಗೆ ಹರಿಬಿಟ್ಟರು ಎಂದು ಜನ ಮಾತನಾಡಿಕೊಳ್ಳುವಂತಾಗಿದೆ. ಅವರ ಹೇಳಿಕೆ ಕಾಂಗ್ರೆಸ್​ ಪಕ್ಷಕ್ಕೇ ಮುಜುಗರ ಉಂಟುಮಾಡಿದೆ.

ಹಿಂದುತ್ವ ವಿಚಾರದಲ್ಲಿ ಸದಾ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗ ಮಾತಿನಲ್ಲಿ ಸ್ವಾಮೀಜಿಗಳನ್ನೂ ಎಳೆದು ತಂದು ವಿವಾದಾತ್ಮಕತೆಗೆ ಕಾರಣರಾಗಿದ್ದಾರೆ.
ಸಿದ್ದರಾಮಯ್ಯ ಅವರ ಹೇಳಿಗೆ ಇಲ್ಲಿದೆ ನೋಡಿ;

ಹಿಜಾಬ್ ವಿವಾದ ಆಗಲು ಬಿಜೆಪಿಯೇ ಕಾರಣ. ಮುಸ್ಲಿಂ ಹೆಣ್ಣು ಮಕ್ಕಳು ದುಪ್ಪಟ್ಟವನ್ನ ತಲೆಗೆ ಹಾಕಿ ಕೊಳ್ಳುತ್ತೇನೆ ಅಂದರೆ ಅದರಲ್ಲಿ ತಪ್ಪೇನಿದೆ? ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನಿಸ್ತೀರಾ?’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ‌‌

ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ ಬೇಡ ಎಂಬ ವಿಚಾರಕ್ಕೆ ಸ್ವಾಮೀಜಿಯವರು ಧರಿಸುವ ಪೇಟ, ಶಾಲಿಗೆ ಹೋಲಿಕೆ ಮಾಡಿದ್ದು ಸರಿಯೇ? ಸ್ವಾಮೀಜಿಗಳು ತಲೆವಸ್ತ್ರ ಹಾಕಿಕೊಂಡು ಶಾಲೆಯಲ್ಲಿ ಕೂರಲ್ಲ. ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯರ ಮಾತಿಗೆ ಬಿಜೆಪಿ ನಾಯಕರು, ಕ್ಷಮೆ ಕೋರುವಂತೆ ಆಗ್ರಹಿಸುತ್ತಿದ್ದಾರೆ.

Leave A Reply