ಪುತ್ತೂರು : ಹಲವು ಕಡೆ ಕಳ್ಳತನ ,ಅಂತರಾಜ್ಯ ಕಳ್ಳರ ಬಂಧನ

ಪುತ್ತೂರು: ತಿಂಗಳ ಹಿಂದೆ ಬಲ್ನಾಡು ಗ್ರಾಮದ ಉಜ್ರುಪಾದೆ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಂತರಾಜ್ಯ ಕಳ್ಳರಿಬ್ಬರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಬ್ಬರು ಕೇರಳ ಮತ್ತು ಕರ್ನಾಟಕದಲ್ಲಿ ಹಲವು ಕಡೆ ಕಳ್ಳತನ ಮಾಡಿದ್ದು ಅವರ ವಿರುದ್ಧ ಹಲವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರಂಟ್ ಜಾರಿಯಾಗಿತ್ತು. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಇನ್ನೊಂದು ಕಳವು ಪ್ರಕರಣದ ಮೂಲಕ ವಾರಂಟ್ ಆರೋಪಿಗಳ ಬಂಧನವಾದ್ದಂತಾಗಿದೆ.

ಚಿಕ್ಕಮುಡ್ನ್ನೂರು ಗ್ರಾಮದ ತಾರಿಗುಡ್ಡೆ ದಿ.ಮೋಯಿದ್ದೀನ್
ಅವರ ಪುತ್ರ ಮಹಮ್ಮದ್ ಅಶ್ರಫ್ ಯಾನೆ ತಾರಿಗುಡ್ಡೆ ಅಶ್ರಫ್ ಯಾನೆ ಮನ್ಸೂರ್ ಯಾನೆ ಕಳ್ಳ ಆಶ್ರಫ್ (42ವ)ರವರು ಮತ್ತು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಕೆರೆಮೂಲೆ ನಿವಾಸಿ ಪ್ರಸ್ತುತ ಗುಂಪಕಲ್ಲು ನಿವಾಸಿಯಾಗಿರುವ ಯೂಸೂಫ್ ಅವರ ಪುತ್ರ ಕೆ.ಮೊಹಮ್ಮದ್ ಸಲಾಂ ಬಂಧಿತ ಆರೋಪಿಗಳು.


Ad Widget

Ad Widget

Ad Widget

ಆರೋಪಿಗಳು ಫೆ. 26ರಂದು ಬಲ್ನಾಡು ಉಜ್ರುಪಾದೆ ಶಿವಪ್ರಸಾದ್ ಭಟ್ ಅವರ ಮನೆಯಿಂದ ರಾತ್ರಿ ಮನೆಯ ಬೀಗವನ್ನು ಮುರಿದು ಸುಮಾರು 160 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳು ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಅಜ್ಜನಡ್ಕ ಮಹಮ್ಮದ್ ಆಲಿ ಎಂಬವರ ಮನೆಯಿಂದ, ಬಲ್ನಾಡು ಗ್ರಾಮದ ವಿಷ್ಣುಮೂರ್ತಿ ದೈವಸ್ಥಾನದಿಂದ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿಯಿಂದ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ, ಕೇರಳ ರಾಜ್ಯದ ಕಾಸರಗೋಡು ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆರ್ಕಳದಲ್ಲಿ ಎರಡು ಮನೆಗಳಿಂದ ಕಳ್ಳತನ ಮಾಡಿರುವ ಕುರಿತು ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.

ರೂ.6.5 ಲಕ್ಬಂಧಿತ ಆರೋಪಿಗಳಿಂದ ರೂ. 5ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಲ್ಯಾಪ್‌ಟಾಪ್, ಸಿಸಿ ಕ್ಯಾಮರ ಡಿವಿಆರ್ ಮತ್ತು ಕಳ್ಳತನಕ್ಕೆ ಉಪಯೋಗಿಸಿದ ಬೈಕ್‌ವನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಒಟ್ಟು ರೂ. 6.5ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.

ಆರೋಪಿಗಳು ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಅಜ್ಜಿನಡ್ಕ ಮಹಮ್ಮದ್ ಆಲಿ ಎಂಬವರ ಮನೆಯಿಂದ, ಬಲ್ನಾಡು ಗ್ರಾಮದ ವಿಷ್ಣುಮೂರ್ತಿ ದೈವಸ್ಥಾನದಿಂದ, ಇದೇ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿಯಿಂದ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ, ಕೇರಳ ರಾಜ್ಯದ ಕಾಸರಗೋಡು ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆರ್ಕಳದಲ್ಲಿ ಎರಡು ಮನೆಗಳಿಂದ ಕಳ್ಳತನ ಮಾಡಿರುವ ಕುರಿತು ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.

ರೂ.6.5 ಲಕ್ಷ ಮೌಲ್ಯದ ಸೊತ್ತು ವಶಕ್ಕೆ: ಬಂಧಿತ ಆರೋಪಿಗಳಿಂದ ರೂ. 5ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಲ್ಯಾಪ್‌ಟಾಪ್, ಸಿಸಿ ಕ್ಯಾಮರ ಡಿವಿಆರ್ ಮತ್ತು ಕಳ್ಳತನಕ್ಕೆ ಉಪಯೋಗಿಸಿದ ಬೈಕ್‌ವನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಒಟ್ಟು ರೂ. 6.5ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.

Leave a Reply

error: Content is protected !!
Scroll to Top
%d bloggers like this: