ನಿಮ್ಮ ತೋಟದಲ್ಲಿ ಪಪ್ಪಾಯಿ ಬೆಳೆಸಿ 10 ಲಕ್ಷ ಗಳಿಸಿ !! | ವರ್ಷವಿಡೀ ಆದಾಯ ನೀಡುವ ಈ ಬೆಳೆಯ ಪ್ರಾಮುಖ್ಯತೆ ಇಲ್ಲಿದೆ ನೋಡಿ

ಇತ್ತೀಚಿನ ವರ್ಷಗಳಲ್ಲಿ ರೈತರ ಗಮನ ಉತ್ತಮ ಆದಾಯ ಗಳಿಸಬಲ್ಲ ಬೆಳೆಗಳ ಮೇಲಿದೆ. ತೋಟಗಾರಿಕಾ ಬೆಳೆಗಳಿಗೆ ಉತ್ತಮ ಬೇಡಿಕೆ ಇರುವುದರಿಂದ ರೈತರು ಇಂತಹ ಬೆಳೆಗಳ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಅಂತಹ ಬೆಳೆಗಳಲ್ಲಿ ಪಪ್ಪಾಯಿ ಬೆಳೆಯೂ ಒಂದು. ಗ್ರಾಮೀಣ ಭಾಗದ ರೈತರು ಪಪ್ಪಾಯಿ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಯಾಕೆಂದರೆ ಈ ಬೆಳೆಯಿಂದ ಹೆಚ್ಚು ಲಾಭಗಳಿಸಬಹುದು.

ಪಪ್ಪಾಯಿವನ್ನು ಹಣ್ಣಾಗುವ ಮೊದಲು ಹಾಗೂ ಮಾಗಿದ ನಂತರ ಕೂಡ ಬಳಸಬಹುದು. ಪಪ್ಪಾಯಿವನ್ನು ಹೆಚ್ಚಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನೆಡಲಾಗುತ್ತದೆ. ಪಪ್ಪಾಯಿ ಕೃಷಿಯ ಅತ್ಯುತ್ತಮ ವಿಷಯವೆಂದರೆ ಅದನ್ನು ನೀವು ವರ್ಷವಿಡೀ ಬೆಳೆಸಬಹುದು. ಮಾರುಕಟ್ಟೆಯಲ್ಲಿ 12 ತಿಂಗಳ ಉತ್ಪಾದನೆಯನ್ನು ನೀಡುವ ಹಲವಾರು ಪ್ರಭೇದಗಳಿವೆ. ಪಪ್ಪಾಯಿಗಳಲ್ಲಿ, ಮುಖ್ಯವಾಗಿ ಸೆಪ್ಟೆಂಬರ್ ಮತ್ತು ಮಾರ್ಚ್- ಏಪ್ರಿಲ್ ನಲ್ಲಿ ಬಿತ್ತಲಾಗುತ್ತದೆ. ಈ ಕಾರಣದಿಂದಾಗಿ ನೀವು ವರ್ಷವಿಡೀ ಈ ಬೆಳೆಯನ್ನು ಬೆಳೆಯಬಹುದು.

ಪಪ್ಪಾಯಿ ಮರಗಳನ್ನು ಸಣ್ಣ ಗುಂಡಿಗಳನ್ನು ಮಾಡುವ ಮೂಲಕ ನೆಡಲಾಗುತ್ತದೆ. ಬೀಜಗಳನ್ನು ಬಿತ್ತಿದ 10 ರಿಂದ 12 ದಿನಗಳ ನಂತರ ಅವು ಮೊಳಕೆಯೊಡೆಯುತ್ತವೆ. ಪಪ್ಪಾಯಿ ಮರಕ್ಕೆ ಹೆಚ್ಚು ನೀರು ಮತ್ತು ಸೂರ್ಯನ ಬೆಳಕು ಬೇಕು. ಆದ್ದರಿಂದ, ನೀರು ಮತ್ತು ಸೂರ್ಯನ ಬೆಳಕು ಎರಡನ್ನೂ ಸುಲಭವಾಗಿ ಸಿಗುವ ಪ್ರದೇಶದಲ್ಲಿ ಅದನ್ನು ನೆಡಬೇಕು. ಇದಕ್ಕಾಗಿ ಗರಿಷ್ಠ ತಾಪಮಾನವು 38 ಡಿಗ್ರಿಯಿಂದ 44 ಡಿಗ್ರಿ ಸೆಲ್ಸಿಯಸ್ ಆಗಿರಬೇಕು. ಈ ಬೆಳೆ ಶಾಖ ಮತ್ತು ಹಿಮದಿಂದ ಹಾನಿಗೊಳಗಾಗುತ್ತದೆ.

ಪಪ್ಪಾಯಿ ಮರಗಳು ಬೇಗನೆ ಫಲ ನೀಡಲು ಪ್ರಾರಂಭಿಸುತ್ತವೆ. ಹಾಗಾಗಿ ಹೆಚ್ಚು ಫಲವತ್ತಾದ ಭೂಮಿಯ ಅಗತ್ಯವಿದೆ. ಮನೆಯಲ್ಲಿ ತಯಾರಿಸಿದ ಗೊಬ್ಬರವು ಇದಕ್ಕೆ ಸೂಕ್ತವಾಗಿರುತ್ತದೆ. ಸ್ವಲ್ಪ ಪ್ರಮಾಣದ ಗೊಬ್ಬರ ಸಾಕು, ಸಗಣಿ ಇದಕ್ಕೆ ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ. ಪಪ್ಪಾಯಿ ಬೆಳೆ ಕಟಾವಿಗೂ ಒಂದು ಸಮಯವಿದೆ. ನೀವು ಬಲಿತ ಪಪ್ಪಾಯಿಯನ್ನು ಕೀಳಲು ಬಯಸಿದರೆ, ಹಸಿರು ಬಣ್ಣಕ್ಕೆ ತಿರುಗಿದ ನಂತರ ದೊಡ್ಡ ಗಾತ್ರದಲ್ಲಿ ಬೆಳೆದ ನಂತರ ನೀವು ಅದನ್ನು ಕೀಳಬಹುದು. ನೀವು ಹಣ್ಣಾಗಲು ಕಾಯುತ್ತಿದ್ದರೆ, ಹಸಿರು ಪಪ್ಪಾಯಿ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದಾಗ, ಅದನ್ನು ತೆಗೆಯಬೇಕು.

ದೇಶದ ಹಲವು ರಾಜ್ಯಗಳಲ್ಲಿ ಪಪ್ಪಾಯಿಯನ್ನು ಬೆಳೆಯಲಾಗುತ್ತದೆ. ಪಪ್ಪಾಯಿ ಮರದಿಂದ ಕನಿಷ್ಠ 50 ಕೆ.ಜಿ. ಹಣ್ಣುಗಳು ಸಿಗುತ್ತವೆ. ಪಪ್ಪಾಯಿಯ ಗಾತ್ರ ಕನಿಷ್ಠ 2 ಕೆ.ಜಿ. ಇರುತ್ತದೆ. ಪ್ರತಿ ಹೆಕ್ಟೇರಿಗೆ ರಾಷ್ಟ್ರೀಯ ಮಟ್ಟದ ಉತ್ಪಾದಕತೆಯನ್ವಯ 317 ಕ್ವಿಂಟಾಲ್‌ನಷ್ಟು ಪಪ್ಪಾಯಿ ಸಿಗುತ್ತದೆ ಎನ್ನಲಾಗಿದೆ. ಒಂದು ಎಕರೆ ಜಮೀನಿನಲ್ಲಿ ಸುಮಾರು 2,000 ಸಸಿಗಳನ್ನು ನೆಡಬಹುದು.

ಮಾರುಕಟ್ಟೆಯಲ್ಲಿ ಪಪ್ಪಾಯಿಯ ಬೆಲೆ ಉತ್ತಮವಾಗಿದ್ದರೆ ಒಂದು ಎಕರೆ ಜಮೀನಿನಲ್ಲಿ ರೈತ ಕನಿಷ್ಠ 5 ರಿಂದ 10 ಲಕ್ಷ ರೂಪಾಯಿ ಗಳಿಸಬಹುದು ಎಂದು ಹೇಳಲಾಗುತ್ತದೆ. ಪಪ್ಪಾಯಿ ಕೃಷಿಗೆ ತಗಲುವ ವೆಚ್ಚ ಕಡಿಮೆ ಎಂಬುವುದು ಉಲ್ಲೇಖನೀಯ. ಮರಕ್ಕೆ ಯಾವುದೇ ರೀತಿಯ ರೋಗ ತಗುಲಿದರಷ್ಟೇ ಅದಕ್ಕೆ ಕೀಟನಾಶಕವನ್ನು ಬಳಸಲಾಗುತ್ತದೆ. ಇಲ್ಲದಿದ್ದರೆ ಬೇರೆ ಯಾವುದೇ ರೀತಿಯ ಖರ್ಚು ಈ ಬೆಳೆಗಿಲ್ಲ.

Leave A Reply

Your email address will not be published.