ಸಿನಿಮಾ ನೋಡಿ ವಾಪಾಸು ಮನೆಗೆ ತೆರಳುತ್ತಿದ್ದ ವೈದ್ಯೆ ಮೇಲೆ ಅಪ್ರಾಪ್ತರಿಂದ ಗ್ಯಾಂಗ್ ರೇಪ್ !

Share the Article

ಸಿನಿಮಾ ನೋಡಿಕೊಂಡು ವಾಪಾಸು ಬರುವ ಸಮಯದಲ್ಲಿ ಮಹಿಳೆಯೋರ್ವಳಿಗೆ ಗ್ಯಾಂಗ್ ರೇಪ್ ಮಾಡಿರುವ ಕೃತ್ಯವೊಂದು ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.

ಬಿಹಾರ ಮೂಲದ ವೈದ್ಯೆಯ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆಯೊಂದು ಮಾರ್ಚ್ 16ರ ತಡರಾತ್ರಿ ನಡೆದಿರುವುದಾಗಿ ತಿಳಿದುಬಂದಿದೆ.

ವೈದ್ಯೆಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗುವ ವೇಳೆ ಇನ್ನಿಬ್ಬರು ಆರೋಪಿಗಳು ಸಂತ್ರಸ್ತೆ ಪುರುಷ ಸಹೋದ್ಯೋಗಿಯನ್ನು ಹಿಡಿದಿಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದ ನಾಗುರ ಮೂಲದ ಸಹೋದ್ಯೋಗಿ ಜತೆ ಮಾರ್ಚ್ 16ರ ರಾತ್ರಿ ಕಟ್ಟಾಡಿಯಲ್ಲಿರುವ ಚಿತ್ರಮಂದಿರದಲ್ಲಿ ಸಿನಿಮಾ ನೋಡಿಕೊಂಡು ಮನೆಗೆ ಹಿಂದಿರುಗುತ್ತಿದ್ದರು. ಈ ಸಮಯದಲ್ಲಿ ಆರೋಪಿಗಳ ಬಳಿ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿಗೆ ದಾರಿ ಕೇಳಿದ್ದಾರೆ. ಆದರೆ, ಆರೋಪಿಗಳು ಅವರನ್ನು ಬೇಕಿ ಚಾನೆಲ್ ಮಾರ್ಗಕ್ಕೆ ಕೊಂಡೊಯ್ದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ, ಯುವಕನಿಂದ ಎಟಿಎಂ ಕಾರ್ಡ್ ಬಳಸಿ 40,000 ರೂ ಹಣವನ್ನು ಬಲವಂತವಾಗಿ ಡ್ರಾ ಮಾಡಿಸಿದ್ದಾರೆ.

ಸಂತ್ರಸ್ತೆಯು ತನ್ನ ತವರು ರಾಜ್ಯ ಬಿಹಾರಕ್ಕೆ ತೆರಳಿ ಅಲ್ಲಿಂದ ಮತ್ತು ಮಂಗಳವಾರ ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದಾರೆ.

ಈ ಪ್ರಕರಣ ಬಗ್ಗೆ ತಮಿಳುನಾಡಿನ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಧ್ವನಿ ಎತ್ತಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Leave A Reply