ಅಡುಗೆ ಸಿದ್ಧಪಡಿಸಲು ಅಡುಗೆ ಕೋಣೆಗೆ ತೆರಳಿದ ಮಹಿಳೆಗೆ ಕಾದಿತ್ತು ಸಾವು!! ಹಾವು ಕಚ್ಚಿ ಗೃಹಿಣಿ ಮೃತ್ಯು-ಮುಗಿಲು ಮುಟ್ಟಿದ ಮನೆಮಂದಿಯ ಆಕ್ರಂದನ

ಅಡುಗೆ ತಯಾರಿಸಲು ಅಡುಗೆ ಮನೆಗೆ ತೆರಳಿದ ಮಹಿಳೆಯೊಬ್ಬರು ಹಾವು ಕಚ್ಚಿ ಮೃತಪಟ್ಟ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಸಿಗೆ ಗ್ರಾಮದಲ್ಲಿ ನಡೆದಿದೆ.

 

ಮೃತ ಮಹಿಳೆಯನ್ನು ಗೃಹಿಣಿ ಸೌಮ್ಯ(40) ಎಂದು ಗುರುತಿಸಲಾಗಿದೆ. ಮಹಿಳೆಯು ಅಡುಗೆ ಸಿದ್ಧಪಡಿಸಲು ಅಡುಗೆ ಮನೆಗೆ ತೆರಳಿದ ಸಂದರ್ಭ ಆಚಾನಕ್ ಆಗಿ ಅಡುಗೆ ಮನೆ ಸೇರಿಕೊಂಡಿದ್ದ ಹಾವು ಕಚ್ಚಿದೆ.

ಹಾವು ಕಚ್ಚಿದ ವಿಚಾರ ಮಹಿಳೆಯ ಗಮನಕ್ಕೆ ಬಾರದೆ ಇದ್ದು, ಕೆಲ ಹೊತ್ತಿನ ಬಳಿಕ ಕಾಲು ಊದಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಹಾವು ಕಚ್ಚಿರುವುದನ್ನು ದೃಢಪಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿತ್ತು.

ಆದರೆ ಮಹಿಳೆಯ ಸ್ಥಿತಿ ಗಂಭೀರವಾಗಿ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸುವ ಸಂದರ್ಭ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಸೌಮ್ಯರಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿತ್ತು.

Leave A Reply

Your email address will not be published.