ಅತ್ಯಾಚಾರ ಆರೋಪಿಯನ್ನು ಕಂಡು ಹಿಡಿಯಲು ಮನೆ ಮುಂದೆ ಬುಲ್ಡೋಜರ್ ತಂದ ಪೊಲೀಸರು | ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಕೂಡಲೇ ಶರಣು !

ಉತ್ತರಪ್ರದೇಶದ ಪ್ರತಾಪ್ ಗಢ ರೈಲ್ವೇ ನಿಲ್ದಾಣದಲ್ಲಿ ಇತ್ತೀಚೆಗೆ ಶೌಚಾಲಯವನ್ನು ನಡೆಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯದೊಳಗೆ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಅನಂತರದ ಬೆಳವಣಿಗೆಯಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು‌ ಸಾಬೀತಾಗಿತ್ತು.

ಆ ಕೂಡಲೇ ಪೊಲೀಸರು ಆರೋಪಿಗಾಗಿ ಹುಡುಕಾಟ ಪ್ರಾರಂಭಿಸಿದ್ದರೂ ಆರೋಪಿ ತಲೆಮರೆಸಿಕೊಂಡಿದ್ದ.


Ad Widget

Ad Widget

Ad Widget

ಆತ ತನ್ನ ಮನೆಯಲ್ಲಿ ಇಲ್ಲದ ಕಾರಣ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು ಆತನನ್ನು ಹುಡುಕಲು ವಿಫಲವಾದ ಕಾರಣ, ಅವರು ಅವರ ಮನೆಯ ಹೊರಗೆ ಬುಲ್ಡೋಜರ್ ತಂದಿದ್ದಾರೆ ಮತ್ತು ಆರೋಪಿಯು 24 ಗಂಟೆಗಳ ಒಳಗೆ ಶರಣಾಗದಿದ್ದರೆ, ಅವನ ಮನೆ ನೆಲಸಮ ಮಾಡುವುದಾಗಿ ಆರೋಪಿಯ ಮನೆಯ ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ನೀಡಿದ ಈ ಎಚ್ಚರಿಕೆ ಆರೋಪಿಯನ್ನು ಹುಡುಕಲು ಸರಿಯಾದ ಮಾರ್ಗವಾಗಿತ್ತು. ಈ ವಿಷಯ ಆತನಿಗೆ ತಿಳಿದು ತಾನು ಇರುವ ಪ್ರದೇಶದ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರಿಂದ, ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.

ಅಪರಾಧಿಗಳನ್ನು ಹಿಡಿಯಲು ಪೊಲೀಸರು ಬುಲ್ಡೋಜರ್ ಅನ್ನು ಬುದ್ಧಿವಂತಿಕೆಯಿಂದ ಬಳಸುತ್ತಿರುವುದು ಬಹುಶಃ ಇದೇ ಮೊದಲು.

ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಈ ಬಾರಿ ‘ಅಭಿವೃದ್ಧಿ’ ಹಾಗೂ ‘ಶೋಷಣೆ’ಯ ರೂಪಕವಾಗಿ ಉಪಯೋಗಿಸಲಾಗುತ್ತದೆ‌ ಏನಿದು ಬುಲ್ಡೋಜರ್ ಮಹಿಮೆ ? ಬನ್ನಿ ತಿಳಿಯೋಣ: ಉತ್ತರ ಪ್ರದೇಶದಲ್ಲಿ ಅಧಿಕಾರ ಗಿಟ್ಟಿಸಿದ ಬಳಿಕಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಕಟ್ಟಡಗಳೆಂದು ಬಹಳಷ್ಟು ಕಟ್ಟಡಗಳನ್ನು ಕೆಡವಿತ್ತು. ಯೋಗಿ ಈ ತೆರವು ಕ್ರಮಗಳನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿ ‘ಬುಲ್ಡೋಜರ್ ಬಾಬಾ’ ಎಂದು ವ್ಯಂಗ್ಯ ಕೂಡಾ ಮಾಡಿದ್ದರು. ಈಗ ಅದೇ ಬುಲ್ಡೋಜರ್ ಅಪರಾಧಿಯನ್ನು ಹಿಡಿಯಲು ಸಹಾಯ ಮಾಡಿರುವುದು ಗಮನಾರ್ಹ.

Leave a Reply

error: Content is protected !!
Scroll to Top
%d bloggers like this: