ಅಪರಿಚಿತರ ಕೈಗೆ ATM ಕಾರ್ಡ್ ಕೊಟ್ಟು ಹಣ ಡ್ರಾ ಮಾಡಿಸುವವರೇ ಎಚ್ಚರ|ಈ ವ್ಯಕ್ತಿಗಾದ ಪರಿಸ್ಥಿತಿ ನಿಮಗೂ ಆಗೋ ಮುಂಚೆ ಎಚ್ಚೆತ್ತುಕೊಳ್ಳಿ!
ಕೊಳ್ಳೇಗಾಲ: ಅದೆಷ್ಟೋ ಜನರಿಗೆ ಇಂದಿಗೂ ಎಟಿಎಂ ಬಳಕೆ ತಿಳಿಯದೆ ಇದೆ. ಇಂತವರು ತಮಗೆ ಅಗತ್ಯ ಹಣ ಬೇಕಾದಾಗ ಅಪರಿಚಿತರ ಕೈಗೆ ಕಾರ್ಡ್ ಕೊಟ್ಟು ಹಣ ಡ್ರಾ ಮಾಡಿಸುತ್ತಾರೆ. ಇಂತವರಿಗೆ ಈ ಘಟನೆಯೇ ಎಚ್ಚರಿಕೆ ಆಗಿದೆ..
ಹೌದು.ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂಗೆ ಕಳೆದ ಎರಡ್ಮೂರು ದಿನಗಳ ಹಿಂದೆ ಜಾಗೇರಿ ಗ್ರಾಮದ ಶೇಶುರಾಜ್ ಹೋಗಿದ್ದರು.ಎಟಿಎಂ ಬಳಕೆ ಮಾಡೋಕೆ ಬಾರದ ಕಾರಣ ಅವರು ಅಲ್ಲೇ ಇದ್ದ ಅಪರಿಚಿತನ ಕೈಗೆ ಕಾರ್ಡ್ ಕೊಟ್ಟು 500 ರೂ. ಪಡೆದು ಕೊಂಡು ಮನೆಗೆ ತೆರಳಿದ್ದಾರೆ.
ಆದರೆ ಒಂದು ದಿನದ ಬಳಿಕ ಅವರಿಗೆ ಕಾದಿತ್ತು ಶಾಕ್..ಯಾಕಂದ್ರೆ ನಿಮ್ಮ ಖಾತೆಯಿಂದ 19 ಸಾವಿರ ರೂ. ಡ್ರಾ ಆಗಿದೆ ಎಂಬ ಮೆಸೇಜ್ ಅವರ ಮೊಬೈಲ್ಗೆ ಬಂದಿದೆ.ತನ್ನ ಬಳಿಯೇ ಎಟಿಎಂ ಕಾರ್ಡ್ ಇದ್ದರೂ ಹೇಗೆ ಹಣ ಡ್ರಾ ಆಗಿದೆ ಎಂದು ಶೇಶುರಾಜ್ಗೆ ಆಶ್ಚರ್ಯವಾಗಿದ್ದು, ಬಳಿಕ ಜೇಬಲ್ಲಿದ್ದ ಎಟಿಎಂ ಕಾರ್ಡ್ ತೆಗೆದು ನೋಡಿದಾಗ ಅದು ಬೇರೆ ಕಾರ್ಡ್ ತನ್ನದಲ್ಲ ಎಂದು ಗೊತ್ತಾಗಿದೆ.
ಬಳಿಕ ಅವರಿಗೆ ಅಪರಿಚಿತರ ಕೈಗೆ ಕಾರ್ಡ್ ಕೊಟ್ಟಿದ್ದೆ ಅನ್ನೋದು ನೆನಪಾಗಿ,ಮಾ.24ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶೇಶುರಾಜ್ ದೂರು ದಾಖಲಿಸಿದ್ದಾರೆ.
ಎರಡ್ಮೂರು ದಿನಗಳ ಹಿಂದೆ ಎಟಿಎಂಗೆ ತೆರಳಿ 500 ರೂ. ತೆಗೆದುಕೊಡಲು ಎಂದು ಅಪರಿಚಿತ ವ್ಯಕ್ತಿಗೆ ಕಾರ್ಡ್ ಕೊಟ್ಟಿದ್ದೆ. ಆಗ ಅವನು ನನ್ನ ಕಾರ್ಡ್ ಬದಲಾಯಿಸಿ ಬೇರೆ ಕಾರ್ಡ್ ಕೊಟ್ಟಿದ್ದಾನೆ. ಇದು ನನಗೆ ಗೊತ್ತಾಗಿಲ್ಲ. ಒಂದು ದಿನದ ಬಳಿಕ ಯಳಂದೂರಿನ ಎಟಿಎಂವೊಂದರಲ್ಲಿ 19 ಸಾವಿರ ರೂ.ಡ್ರಾ ಮಾಡಿದ್ದಾನೆ. ಅವನನ್ನು ಹುಡುಕಿ ಹಣ ವಾಪಸ್ ಕೊಡಿಸಿ ಎಂದು ಕೋರಿದ್ದಾರೆ.